ಬೆಂಗಳೂರು: ಪೊಲೀಸರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ನಾಗರಾಜ್(47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದ್ದು, ಇವರು ಸನಾವುಲ್ಲಾ ಒಡೆತನದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಈ ಕಂಪನಿ ಹಣ ಪಡೆದು ವಂಚಿಸುತ್ತಿದೆ ಎಂದು ನಟರಾಜ್ ಎಂಬ ವ್ಯಕ್ತಿ ವೈಯಾಲಿಕಾವಲ್ ಠಾಣೆಯಲ್ಲಿ ದೂರು ನೀಡಿದ್ದ. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಹಣ ಪಡೆದು ವಂಚಿಸಿರುವ ಕಂಪನಿ ಮಾಲೀಕ ಸನಾವುಲ್ಲಾ ಬದಲು, ನಾಗರಾಜ್ ನನ್ನು ಕರೆದೊಯ್ದು ಕಿರುಕುಳ ನೀಡದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಡೆತ್ ನೋಟ್ ನಲ್ಲಿ ವಿಷಯ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡೆತ್ನೋಟ್ನಲ್ಲಿ ‘ವೈಯಾಲಿಕಾವಲ್ ಪೊಲೀಸರು ಬೆಲ್ಟ್ ನಿಂದ ಹೊಡೆದು, ಬ್ಯಾಟ್ನಿಂದ ಬಡಿದು ಶೂ ನಿಂದ ಒದ್ದಿದ್ದರು. ವೈಯಾಲಿ ಕಾವಲ್ ಪೊಲೀಸ್ ಇನ್ಸ್ ಪೆಕ್ಟರ್, ಸನಾವುಲ್ಲಾ, ನಟರಾಜ್, ಎಂ.ಸಿ ಯೆರ್ರೇಗೌಡ ಹೆಸರು ಉಲ್ಲೇಖ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.