ಪ್ರೀತಿಗೆ ಒಪ್ಪದ ಯುವತಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಪಾಗಲ್ ಪ್ರೇಮಿ..!
ಹಾಸನ: ಪ್ರೀತಿ ನಿರಾಕರಿಸಿದ ಹಿನ್ನೆಲೆ ಪಾಗಲ್ ಪ್ರೇಮಿಯೋರ್ವ ಯುವತಿಯನ್ನ ನಡುರಸ್ತೆಯಲ್ಲೇ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಸುಷ್ಮಿತಾ (21) ಹತ್ಯೆಗೀಡಾದ ಯುವತಿ. ಈಕೆಯನ್ನು ಅದೇ ಗ್ರಾಮದ ಹೇಮಂತ್ (25) ಹೆಸರಿನ ಯುವಕ ಪ್ರೀತಿಸುತ್ತಿದ್ದ. ಆದರೆ ಯುವತಿ ಪ್ರೀತಿಗೆ ಒಪ್ಪದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ.
ನಟಿ ಸೌಂದರ್ಯ ಅತ್ತಿಗೆಯಿಂದ ಸೌಂದರ್ಯ ಸ್ಮರಣಾರ್ಥ ವಿಶೇಷ ಚೇತನರ ಶಾಲೆ; ಅಮರ ಸೌಂದರ್ಯ ಫೌಂಡೇಷನ್ ವತಿಯಿಂದ ಭೂಮಿ ಪೂಜೆ..
ಯುವತಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಏಕಾಏಕಿ ಆಕೆಯ ಮೇಲೆ ಹೇಮಂತ್ ದಾಳಿ ನಡೆಸಿದ್ದಾನೆ. ಮಚ್ಚಿನಿಂದ ಆಕೆಯನ್ನು ಮನಬಂದಂತೆ ಕೊಚ್ಚಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ಧಾರೆ.
ಸಲಾರ್ ಸೆಟ್ ಗೆ ‘ಬರ್ತ್ ಡೇ ಗರ್ಲ್’ ಗೆ ಅದ್ಧೂರಿಯಾಗಿ ವೆಲ್ ಕಮ್ ಮಾಡಿದ ಟೀಮ್ ..!
ಹಾಸನದ ಸಕಲೇಶಪುರದಲ್ಲಿ ಪಾಗಲ್ ಪ್ರೇಮಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟಕ್ಕೆ ಮದುವೆ ಮಾಡಿಕೊಂಡು ಇಷ್ಟೊತ್ತಿಗೆ ಗಂಡನ ಜೊತೆ ಸುಖ ಸಂಸಾರ ನಡೆಸಬೇಕಾಗಿದ್ದ ಯುವತಿಯ ಜೀವನ ಸರ್ವನಾಶವಾಗಿ ಹೋಗಿದೆ. ಹೌದು ಈತ ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳನ್ನ ಬಲವಂತವಾಗಿ ಆಕೆಯ ಮನೆಯವರ ಎದುರಲ್ಲೇ ತಾಳಿ ಕಟ್ಟಿ ಮದುವೆಯಾಗಿ ಆಕೆಯನ್ನ ಎಳೆದೊಯ್ದಿದ್ದ. ಬಳಿಕ ಆತನನ್ನ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel