ಮಧ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ತಂದೆಯನ್ನೆ ಕೊಂದ ಪುತ್ರ  

1 min read

ಮಧ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ತಂದೆಯನ್ನೆ ಕೊಂದ ಪುತ್ರ

ಮಧ್ಯಪಾನ ಮಾಡೊಕೆ  ಹಣ ಕೊಡದಿದ್ದಕ್ಕೆ ಹೆತ್ತ ತಂದೆಯನ್ನೇ ಪಾಪಿ ಮಗ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ. ಮಂಜಪ್ಪ(65) ಮಗನಿಂದ ಕೊಲೆಯಾದ ತಂದೆ.

ಕುಡಿಯಲು ಹಣಬೇಕು ಎಂದು  ಮಗ ನರಸಿಂಹಪ್ಪ ಕಳೆದ ರಾತ್ರಿ ಮಂಜಪ್ಪನನ್ನು ಪೀಡಿಸಿದ್ದಾನೆ. ಇದಕ್ಕೆ ತಂದೆ ಮಂಜಪ್ಪ, ನನ್ನ ಬಳಿ ಹಣವಿಲ್ಲ. ಸುಮ್ಮನ್ನೆ ಊಟ ಮಾಡಿ ಮಲಗು ಎಂದು ಗದರಿದ್ದಾರೆ. ಇದರಿಂದ ನರಸಿಂಹಪ್ಪ ಕ್ರೋಧಗೊಂಡು  ಮಂಜಪ್ಪನನ್ನು ಎಳೆದಾಡಿ ಜಗಳವಾಡಿದ್ದಾನೆ.

ಎಳೆದಾಡಿ ಕೆಳಗಿ ಬೀಳಿಸಿ ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.  ಪರಿಣಾಮ ತೀವ್ರ ರಕ್ತಸ್ರಾವದಿಂದ ಮಂಜಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಗನ ವಿರುದ್ಧ  ತಾಯಿ ದೂರು ನೀಡಿದ್ದಾರೆ. ತಕ್ಷಣ ಸಿಪಿಐ ದೇವರಾಜ್ ನೇತೃತ್ವದ ತಂಡ ಆರೋಪಿ ನರಸಿಂಹಪ್ಪನನ್ನು ಬಂಧಿಸಿದ್ದಾರೆ.

man killed his father for not giving money for alcohol at Davanagere

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd