ಕೊಪ್ಪಳ: ನಿನ್ನೆಯಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳ ದಾಟುವಾಗ ವೃದ್ಧರೊಬ್ಬರು ಕೊಚ್ಚಿ ಹೋದ(old man washed away) ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ತಾಲೂಕು ಹುಲಿಗಿ-ಶಿವಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳದಲ್ಲಿ ವೃದ್ಧರೊಬ್ಬರು ಸೈಕಲ್ ಎತ್ತಿಕೊಂಡು ಬರುತ್ತಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ವೃದ್ಧ ಕೊಚ್ಚಿಕೊಂಡು ಹೋಗುತ್ತಿದ್ದರು. ಸುಮಾರು ಅರ್ಧ ಕಿ.ಮೀ. ದೂರ ಕೊಚ್ಚಿದ ಹೋದ ವೃದ್ಧ ಈಜಿ ದಡ ಸೇರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ರಸ್ತೆಯಲ್ಲಿ ಸೇತುವೆ ನಿರ್ಮಾಣದ ತುರ್ತು ಅಗತ್ಯವಿದೆ, ಶಾಸಕ ರಾಘವೇಂದ್ರ ಹಿಟ್ನಾಳ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶವ ಹೊತ್ತೋಯ್ದ ವಿಡಿಯೋ ವೈರಲ್..!
ಕೊಪ್ಪಳ ತಾಲೂಕು ಅಳವಂಡಿ-ಕಂಪ್ಲಿ ರಸ್ತೆಯ ಹಳ್ಳ ದಾಟಲು ಜನರ ಪರದಾಟ ಮಾಡುವುದು ನಿತ್ಯ ಸಾಮಾನ್ಯ ದೃಷ್ಯವಾಗಿದೆ. ಈ ಗ್ರಾಮದಲ್ಲಿ ಮಳೆ ಬಂದ್ರೆ ಸಾವು ಕೂಡ ಭಯ ಹುಟ್ಟಿಸುತ್ತೆ. ನಿನ್ನೆ ಸುರಿದ ಭಾರಿ ಮಳೆಯಿಂದ ಹಳ್ಳದಲ್ಲಿಯೇ ಶವ ಹೊತ್ತೊಯ್ದ ವಿಡಿಯೋ ವೈರಲ್ ಆಗಿದೆ.
ನಿನ್ನೆ ಸಂಜೆ ಸುರಿದ ಮಳೆಗೆ ಗ್ರಾಮೀಣ ಭಾಗದಲ್ಲಿ ಹಳ್ಳಗಳು ಭರ್ತಿಯಾಗಿದ್ದು, ಅಳವಂಡಿ ಗ್ರಾಮದ ಸ್ಮಶಾನಕ್ಕೆ ಶವ ಹೊತ್ತೊಯ್ಯಲೂ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ.
ಕಂಪ್ಲಿ ಸೇರಿ ಸುಮಾರು 6 ಗ್ರಾಮದ ಜನ ಇದೇ ರಸ್ತೆ ಮೂಲಕ ಅಳವಂಡಿ ತಲುಪಬೇಕು. ಕಳೆದ 1 ದಶಕದಿಂದ ಜನರು ಪರದಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಕಣ್ಣಿದ್ದು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel