Mandya | ಧಾರಾಕಾರ ಮಳೆಗೆ ಉಕ್ಕಿದ ಭೀಮಾ ನದಿ
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದೆ.
ಧಾರಾಕಾರ ಮಳೆಯಿಂದಾಗಿ 25 ವರ್ಷದ ಬಳಿಕ ಭೀಮಾ ನದಿ ಉಕ್ಕಿ ಹರಿಯುತ್ತಿದೆ.
ಧಾರಾಕಾರ ಮಳೆಯಿಂದಾಗಿ ನೂರಾರು ಎಕರೆ ಜಮೀನು ಜಲಾವೃತಗೊಂಡಿದ್ದು, ತೋಟದ ಮನೆಗಳಿಗೂ ನೀರು ನುಗ್ಗಿದೆ.
ಪರಿಣಾಮ ತೋಟದಲ್ಲಿ ಸಾಕಿದ್ದ 45 ಕುರಿಗಳು, ಒಂದು ಹಸು ಮೃತಪಟ್ಟಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹಲಗೂರು ಗ್ರಾಮದಲ್ಲಿ ಮಧ್ಯೆ ರಾತ್ರಿಯಿಂದ ನಿರಂತರವಾಗಿ ಧಾರಾಕಾರ ಮಳೆಯಾಗಿದೆ.
ಧಾರಾಕಾರ ಮಳೆಗೆ ರಾತ್ರೋರಾತ್ರಿ ಚಿಕ್ಕತೊರೆ ಎಂದೇ ಪ್ರಸಿದ್ಧರಾಗಿರುವ ಭೀಮಾ ನದಿ ಉಕ್ಕಿ ಹರಿದಿದೆ.
ಪರಿಣಾಮ ತೊರೆ ಅಕ್ಕಪಕ್ಕದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.
ತೆಪ್ಪದ ಸಹಾಯದಿಂದ ಮನೆಯಲ್ಲಿದ್ದ ಕಾರ್ಮಿಕ ಹಾಗೂ 3 ಹಸು ರಕ್ಷಣೆ ಮಾಡಲಾಗಿದೆ. Mandya Bhima river