ಮಂಡ್ಯ | ನೇಣು ಬಿಗಿದುಕೊಂಡು ಪೌರ ಕಾರ್ಮಿಕ ಆತ್ಮಹತ್ಯೆ (suicide)
ಮಂಡ್ಯ : ಜೀವನದಲ್ಲಿ ಮನನೊಂದು ಪೌರ ಕಾರ್ಮಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ. 40 ವರ್ಷದ ನಾರಾಯಣ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ.
ನಾರಾಯಣ್ ಕಳೆದ 12 ವರ್ಷದಿಂದ ಮದ್ದೂರು ನಗರದಲ್ಲಿ ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜೀವನದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹವನ್ನು ಮಂಡ್ಯ ಮಿಮ್ಸ್ ಗೆ ರವಾನಿಸಿದ್ದಾರೆ.
