Mandya : KRS ಡ್ಯಾಂ ಒಳ ಹರಿವಿನಲ್ಲಿ ಇಳಿಕೆ
ಮಂಡ್ಯ : ಕೆಆರ್ ಎಸ್ ಜಲಾನಯದಲ್ಲಿ ಮಳೆ ಕಗ್ಗಿದ ಪರಿಣಾಮ ಕೆಆರ್ ಎಸ್ ಡ್ಯಾನ ಒಳ ಹರಿವು ಕಡಿಮೆಯಾಗಿದೆ.
ಈ ಹಿಂದೆ 86,917 ಕ್ಯೂಸೆಕ್ ನೀರು ಒಳಹರಿವಿತ್ತು. ಈಗ 77,585 ಕ್ಯೂಸೆಕ್ ಗೆ ಇಳಿಕೆಯಾಗಿದೆ.
ಡ್ಯಾಂಗೆ ಒಳಹರಿವಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅಧಿಕಾರಿಗಳು ಡ್ಯಾಂನಿಂದ ಹೊರ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ.
ಇದರೊಂದಿಗೆ ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ತಗ್ಗಿದೆ.

ಸದ್ಯ ಕೆಆರ್ ಎಸ್ ಡ್ಯಾನಲ್ಲಿ 123.36 ಅಡಿ ನೀರು ಸಂಗ್ರಹವಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಅಬ್ಬರ ಹೆಚ್ಚಾದ್ರೆ ಮತ್ತೆ ನೆರೆ ಭೀತಿ ಕಾಡಲಿದೆ.
KRS ಡ್ಯಾಂ ಇಂದಿನ ನೀರಿನ ಮಟ್ಟ.
ಗರಿಷ್ಠ ಮಟ್ಟ : 124.80 ಅಡಿ
ನೀರಿನ ಮಟ್ಟ :123.36 ಅಡಿ
ಒಳಹರಿವು : 77,586 ಕ್ಯೂಸೆಕ್
ಹೊರಹರಿವು : 74,414 ಕ್ಯೂಸೆಕ್