ಮಂಡ್ಯ: ರಾಜ್ಯದ ಜೀವನಾಡಿ ಕಾವೇರಿ ನದಿಗೆ ಕಟ್ಟಲಾಗಿರುವ ಕೆಆರ್‍ಎಸ್ ಡ್ಯಾಂ ಉಳಿವಿಗೆ ಆಗ್ರಹಿಸಿ ಮಂಡ್ಯ ಜಿಲ್ಲೆ ಬಂದ್‍ಗೆ ಕೆಆರ್‍ಎಸ್ ಉಳಿಸಿ ಹೋರಾಟ ಸಮಿತಿ ನಿರ್ಣಯ ಕೈಗೊಂಡಿದೆ.
ಮಂಡ್ಯದ ಹಿಂದಿ ಭವನದಲ್ಲಿ ನಡೆದ ಸಭೆ ಕೆಆರ್‍ಎಸ್ ಉಳಿಸಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಭೆಯಲ್ಲಿ ರೈತ ಸಂಘ, ಪ್ರಗತಿಪರ ಹೋರಾಟಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಕೆಆರ್‍ಎಸ್ ಜಲಾಶಯ ಸುತ್ತಮುತ್ತಲಿನ 20ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಕ್ಕೆ ಆಗ್ರಹಿಸಿ ಬಂದ್‍ಗೆ ಕರೆ ನೀಡಲು ತೀರ್ಮಾನ ಮಾಡಲಾಗಿದೆ.
ಮುಂದಿನ ಸಭೆಯಲ್ಲಿ ಬಂದ್ ಯಾವಾಗ ಮಾಡಬೇಕು ಎಂಬುದರ ದಿನಾಂಕ ನಿಗಧಿಗೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ
ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿಂದ ಪಡಿತರ ಬಂದ್!
ಬೆಂಗಳೂರು: ರಾಜ್ಯದ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅತಿ ಮುಖ್ಯವಾದ ಸೂಚನೆಯೊಂದನ್ನು ನೀಡಿದೆ. ರೇಷನ್ ಕಾರ್ಡ್‌ನಲ್ಲಿ ಹೆಸರಿರುವ...








