Mandya KRS ಡ್ಯಾಂನಿಂದ ನೀರು ಬಿಡುಗಡೆ
ಮಂಡ್ಯ : ಕೆಆರ್ ಎಸ್ ಡ್ಯಾಂನಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕೆಆರ್ ಎಸ್ ಡ್ಯಾಂ 124.80 ಅಡಿ ಗರಿಷ್ಟ ಮಟ್ಟ ಹೊಂದಿದ್ದು, ಸದ್ಯ 123 ಅಡಿ ನೀರು ಭರ್ತಿಯಾಗಿದೆ.
ಜೊತೆಗೆ ಒಳ ಹರಿವ ಪ್ರಮಾಣವೂ ಹೆಚ್ಚಾಗುತ್ತಿದೆ.
ಹೀಗಾಗಿ ಕೆಆರ್ ಎಸ್ ಅಧಿಕಾರಿಗಳು 15 ಗೇಟ್ ಮೂಲಕ ನದಿಗೆ ನೀರು ಬಿಡುಗಡೆ ಮಾಡಿದ್ದಾರೆ.
![mandya-krs-release of-water-from-dam saaksha tv](http://saakshatv.com/wp-content/uploads/2020/07/krs-dam1.png)
ಇದರೊಂದಿಗೆ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.
ಅಂದಹಾಗೆ ನಿನ್ನೆ ಮಧ್ಯಾಹ್ನದಿಂದ 10 ಸಾವಿರ ನೀರು ಬಿಡಲಾಗುತ್ತಿತ್ತು.
ಸದ್ಯ ಡ್ಯಾಂಗೆ 30,216 ಒಳ ಹರಿವು ಬರ್ತಿದೆ. ಸಂಜೆ ವೇಳೆಗೆ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೀಗಾಗಿ ನೀರನ್ನು ಹೊರ ಹರಿಸಲಾಗುತ್ತಿದೆ.