ಮಂಡ್ಯ ಗಣಿ ಜಂಜಾಟದಲ್ಲಿ ಹುಲಿಯಾ ರಾಜಕೀಯ ದಾಳ | ಮರುಕಳಿಸುತ್ತಾ ಇತಿಹಾಸ..?
ಬೆಂಗಳೂರು : ಮಂಡ್ಯ ಅಕ್ರಮ ಗಣಿಕಾರಿಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ನಿಧಾನವಾಗಿ ಬಿರುಗಾಳಿಯನ್ನು ಎಬ್ಬಿಸಲು ಶುರು ಮಾಡಿದೆ. ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದೊಂದು ವಾರದಿಂದ ಗಣಿಗಾರಿಕೆ ಧೂಳಿನ ಸದ್ದು ಜೋರಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ಗೆ ರೈತ ಸಂಘ ಬೆಂಬಲ ನೀಡಿದೆ.
ಈ ಮಧ್ಯೆ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಬಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊನ್ನೆ ಸುದ್ದಿಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಮಂಡ್ಯ ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾತನಾಡುತ್ತಾ, ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದರು. 2013ರಲ್ಲಿ ಬಳ್ಳಾರಿ ಗಣಿ ವಿಚಾರವಾಗಿ ಕಾಂಗ್ರೆಸ್ ಮಾಡಿದ ಹೋರಾಟಕ್ಕಿಂತಲೂ ಇನ್ನೂ ಪ್ರಭಾವವಾಗಿ ಹೋರಾಟ ನಡೆಸಲಾಗುವುದು ಆದ್ರೆ ಇದಕ್ಕೆ ಕೊರೊನಾ ಅಡ್ಡ ಇದೆ ಎಂದು ಹೇಳಿದ್ದರು.
ಆದ್ರೆ ಮಂಡ್ಯ ಗಣಿ ಜಂಜಾಟ ದಿನದಿಂದ ದಿನಕ್ಕೆ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವ ಕಾರಣ, ಮುಂದಿನವಾರ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಡಲು ತಂತ್ರರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಮಂಡ್ಯದ ಗಣಿಗಾರಿಕಾ ಪ್ರದೇಶದಲ್ಲಿ ಖುದ್ದು ಪರಿಶೀಲನೆ ಸಾಧ್ಯತೆ ಇದ್ದು, ಈ ಮೂಲಕ ಜೆಡಿಎಸ್ ನ ಹೆಚ್ ಡಿ ಕುಮಾರಸ್ವಾಮಿ, ರಾಜ್ಯದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಮಂಡ್ಯದಲ್ಲಿ ಅಕ್ರಮ ಗಣಿಕಾರಿಕೆ ನಡೆಯುತ್ತಿದ್ದರೇ, ಸಿದ್ದರಾಮಯ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಾಯ ಮಾಡಲಿದ್ದಾರೆ. ಇದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಸಮರ ಸಾರಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯವಾಗಿ ಹೆಚ್ ಡಿ ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆ ಪರ ಇದ್ದಾರೆ ಎಂದು ಸಂಸದೆ ಸುಮಲತಾ ಆರೋಪ ಮಾಡುತ್ತಿದ್ದಾರೆ. ಈ ವಿಚಾರವನ್ನು ಸಿದ್ದರಾಮಯ್ಯ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ – ಜೆಡಿಎಸ್ ಗೆ ಟಕ್ಕರ್ ಕೊಡಲು ತಂತ್ರರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.