Mandya | ಕೆಸರು ಗದ್ದೆಯಾದ ರಸ್ತೆ – ಗ್ರಾಮಸ್ಥರಿಂದ ಭತ್ತ ನಾಟಿ
ಮಂಡ್ಯ : ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ನಾನಾ ರೀತಿ ಅವಾಂತರಗಳು ಸೃಷ್ಠಿಯಾಗಿವೆ.
ಅದರಂತೆ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲೂ ಕೂಡ ಮಳೆ ಆರ್ಭಟಿಸುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿದೆ.
ಸಚಿವ ನಾರಾಯಣಗೌಡ ಪ್ರತಿನಿಧಿಸುವ ಕ್ಷೇತ್ರದ ಗ್ರಾಮದಲ್ಲಿ ರಸ್ತೆ ಕೆಸರುಮಯವಾಗಿದೆ.
ಇದರಿಂದ ಬೇಸತ್ತಿರುವ ಕರೋಟಿ ಗ್ರಾಮಸ್ಥರು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದಾರೆ.

ಅಲ್ಲದೆ ಸಚಿವರು ಹಾಗೂ ಅಧಿಕಾರಿಗಳು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಳೆದ 20 ವರ್ಷಗಳಿಂದ ರಸ್ತೆ ಅಭಿವೃದ್ದಿಯಾಗಿಲ್ಲ.
ಗುಂಡಿ ಬಿದ್ದು ಶಾಲಾ ಮಕ್ಕಳು, ವಾಹನ ಸವಾರರು ಸಂಚರಿಸಲು ಆಗ್ತಿಲ್ಲ.
ಮೂರು ವರ್ಷದಿಂದ ಹಿಂದೆ ಸಚಿವ ನಾರಾಯಣಗೌಡ ಬಂದು ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ ಮಾಡಿದ್ರು.
ಆದ್ರೆ ಅಭಿವೃದ್ದಿ ಆಗಲಿಲ್ಲ.ಶಾಸಕಾಂಗ, ಜಿಲ್ಲಾಡಳಿತ ಎರಡು ಸತ್ತೋಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.








