Sumalata Ambarish: ನಾನು ಬಿಜೆಪಿ ಸೇರಲು ಮಂಡ್ಯ ಜನತೆ ಅನುಮತಿ ಬೇಕು : ಸುಮಲತಾ ಅಂಬರೀಶ್
1 min read
ನಾನು ಬಿಜೆಪಿ ಸೇರಲು ಮಂಡ್ಯ ಜನತೆ ಅನುಮತಿ ಬೇಕು : ಸುಮಲತಾ ಅಂಬರೀಶ್
ಬೆಂಗಳೂರು : ಮಂಡ್ಯದ ಜನತೆ ನನ್ನನ್ನು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ಈಗ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೆ ಹೋಗಬೇಕು ಅಂದರೆ ಮಂಡ್ಯದ ಜನತೆಯ ಅನುಮತಿ ಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ಸೋಮವಾರ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಅವರು ತಮ್ಮ ತಂಗಿಯ ಮಗಳ ಮದುವೆಗೆ ಆಮಂತ್ರಣ ನೀಡಿದರು. ನಂತರ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು, ವಿದ್ಯಾರ್ಥಿನಿ ಮುಸ್ಕಾನ್ ಖಾನ್ಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆ ಆಗುತ್ತಿದೆ. ನನ್ನ ಜಿಲ್ಲೆಗೆ ಏನೇನು ಅಭಿವೃದ್ಧಿ ತರಬಹುದು ಎಂಬುದಷ್ಟೇ ನನ್ನ ಯೋಚನೆ. ಅದೇ ರೀತಿ ಜಿಲ್ಲೆಯ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇನೆ. ಇದು ಬಿಟ್ಟರೆ ಬೇರೆ ರಾಜಕೀಯ ವಿಷಯದ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಅಲ್ಲದೇ ಯಾವುದೇ ಪಕ್ಷ ಸೇರುವುದಕ್ಕೆ ಮಂಡ್ಯದ ಜನರು ಹೇಳಬೇಕೆ ಹೊರತು ನಾನಾಗಿ ಯಾವ ನಿರ್ಧಾರ ತಗೊಳ್ಳಕ್ಕಾಗಲ್ಲ. ಹಾಗೇ ಅಭಿಷೇಕ ಅಂಬರೀಶ್ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸುಮಲತಾ, ಅಭಿಷೇಕ್ ಸ್ಪರ್ಧೆ ಬಗ್ಗೆ