ನಷ್ಟದಲ್ಲಿ ಮಂಗಳೂರು ಕೆ ಎಸ್ ಆರ್ ಟಿ ಸಿ
ಕೋವಿಡ್ ಕಾರಣದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾಕಷ್ಟು ನಷ್ಟವನ್ನ ಅನುಭವಿಸಿದ ನಂತರ ….ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ…ಆದರೂ ಸಹಿತ ಮಂಗಳೂರು ಕೆ ಎಸ್ ಆರ್ ಟಿ ಸಿ ವಿಭಾಗ ಚೇತರಿಕೆ ಕಾಣದೆ ಕಂಗಾಲಾಗಿದೆ.
ಮಂಗಳುರು – ಬೆಂಗಳೂರು ಮಾರ್ಗವಾಗಿ ಈ ಹಿಂದೆ ದಿನವೊಂದಕ್ಕೆ 65 -75 ಬಸ್ ಗಳು ಓಡಾಡುತ್ತಿದ್ದವು… ಈಗ ಅವುಗಳ ಸಂಖ್ಯೆ 50 ರಿಂದ 55ಕ್ಕೆ ಕುಸಿದಿದೆ. ವರ್ಕ್ ಪ್ರಮ್ ಹೋಮ್ ಮತ್ತು ಅಂತರಾಜ್ಯ ಸಾರಿಗೆ ನಿಷೇಧದಿಂದಾಗಿ ಮಂಗಳೂರು ವಿಭಾಗಕ್ಕೆ ಸಾಕಷ್ಟು ನಷ್ಟವುಂಟಾಗಿದೆ.
ಮಂಗಳೂರು ವಿಭಾಗದ ಕೆ ಎಸ ಆರ್ ಟಿ ಸಿ ನಿರ್ವಾಣಾಧಿಕಾರಿ ಎಸ್ ಎನ್ ಅರುಣ್ ಮಾತನಾಡಿ “ ನಾವು ಚೇತರಿಕೆಯನ್ನನ ಕಾಣುತ್ತಿದ್ದೇವೆ..ಆದರೆ ಪ್ರಗತಿ ನಿಧಾನವಾಗಿದೆ. ಐ ಟಿ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ನೀಡಿರುವ ಕಾರಣ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸ್ ಗಳ ಬೇಡಿಕೆ ಕುಸಿದಿದೆ. ನಾವು ಒಂದು ದಿನಕ್ಕೆ ಸರಾಸರಿ 70 ಲಕ್ಷದವರೆಗೆ ಆದಾಯವನ್ನ ಗಳಿಸುತ್ತಿದ್ದೆವು..ಈಗ ಅದು 50 ಲಕ್ಷಕ್ಕೆ ಬಂದು ನಿಂತಿದೆ. ಮಂಗಳೂರು –ಧರ್ಮಸ್ಥಳದ ಮಾರ್ಗ ಚೆನ್ನಾಗಿ ಓಡುತ್ತಿದೆ” ಎಂದು ತಿಳಿಸಿದರು.
ಅಂತರಾಜ್ಯ ಸಾರಿಗೆ ನಿಷೇಧದಿಂದಾಗಿ ಮಂಗಳೂರು – ಕಾಸರಗೋಡು ಮತ್ತು ವಯನಾಡು ಇನ್ನಿತರ ಭಾಗಗಳಿಗೆ ಸಂಚರಿಸುತ್ತಿದ್ದ ಬಸ್ ಗಳಿಂದ ಸಾಕಷ್ಟು ಆದಾಯವನ್ನ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ.