ಯೂಟ್ಯೂಬ್ ನಲ್ಲಿ ಮತ್ತೆ ಮಂಗ್ಲಿ ಹವಾ…! ಹೊಸ ಹಾಡು ಟ್ರೆಂಡಿಂಗ್ ನಲ್ಲಿ..!
ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ಹಾಡು ಕಣ್ಣೇ ಅದಿರಿಂದಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿರುವ ಮಂಗ್ಲಿ ಗಾಯನದ ವಿಭಿನ್ನ ಶೈಲಿಗೆ ಜನ ಮಾರು ಹೋಗಿದ್ದಾರೆ. ಜನಪದ ಸೊಗಡಿನಲ್ಲಿ ವಿಭಿನ್ನ ಶೈಲಿಯ ಗಾಯಯನದಿಂದ ಇದೀಗ ಸೌತ್ ನಲ್ಲಿ ಮಿಂಚುತ್ತಿರುವ ಮಂಗ್ಲಿ ಮತ್ತೊಂದು ಹೊಸ ಹಾಡನ್ನ ಹಾಡಿ ತಮ್ಮ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದಾರೆ. ಈ ಹಾಡು ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ನಲ್ಲಿದ್ದು, ಈ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈಗಾಗಲೇ ಸಿಕ್ಕಾಪಟ್ಟೆ ಲೈಕ್ಸ್ ಪಡೆದುಕೊಂಡಿದ್ದು, ಲಕ್ಷಾಂತರ ವೀವ್ಸ್ ಪಡೆದಿದ್ದು, ನೆಟ್ಟಿಗರು ಮಂಗ್ಲಿ ಧನಿಗೆ ಫಿದಾ ಆಗಿದ್ದಾರೆ. ನಾನಾ ಕಮೆಂಟ್ ಗಳನ್ನ ಮಾಡ್ತಾಯಿದ್ದಾರೆ.
ರಾಮ್ ಚರಣ್ – ಶಂಕರ್ ಸಿನಿಮಾದಲ್ಲಿ ರಶ್ಮಿಕಾಗೆ ಗೇಟ್ ಪಾಸ್..?
ಇತ್ತೀಚೆಗೆ ರಾಬರ್ಟ್ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮದ ವೇದಿಕೆ ಮೇಲೆ ಮಂಗ್ಲಿ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕನ್ನಡದ ಹಾಡಿಗಿಂತ ತೆಲುಗು ಭಾಷೆಯ ಹಾಡು ಅತಿ ಹೆಚ್ಚು ಮೆಚ್ಚುಗೆ ಗಳಿಸಿಕೊಂಡಿದೆ. ಇದೀಗ, ರಾಬರ್ಟ್ ಹಾಡಿನ ಯಶಸ್ಸಿನ ಬೆನ್ನಲ್ಲೆ ಮತ್ತೊಂದು ಹೊಸ ಹಾಡು ರಿಲೀಸ್ ಮಾಡಿದ್ದಾರೆ. ಅಂದ್ಹಾಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನ ಕುರಿತು ಭಕ್ತಿ ಗೀತೆಯೊಂದು ರಚಿಸಿದ್ದು, ತಮ್ಮದೇ ಯ್ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಮಾರ್ಚ್ 8 ರಂದು ಈ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಶಿವನ ಹೆಸರಿಂದ ಪ್ರಾರಂಭವಾಗುವ ಹಾಡು ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದೆ. ಇದುವರೆಗೂ 8.8 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಈ ಹಾಡಿಗೆ ಗೊರಟಿ ವೆಂಕಣ್ಣ ಸಾಹಿತ್ಯ ರಚಿಸಿದ್ದಾರೆ. ದಾಮು ರೆಡ್ಡಿ ನಿರ್ದೇಶಿಸಿದ್ದಾರೆ. ತಿರುಪತಿ ಛಾಯಾಗ್ರಹಣವಿದ್ದು, ಮದೀನ್ ಎಸ್ ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.