ಕನ್ನಡದಲ್ಲಿ ಮೊದಲ ಭಕ್ತಿಗೀತೆ ಆಲ್ಬಂ ಬಿಡುಗಡೆ ಮಾಡಿದ ಮಂಗ್ಲಿ..
ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದಿ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಭಕ್ತಿಗೀತೆಯ ಆಲ್ಬಂ ಬಿಡುಗಡೆ ಮಾಡಿದ್ದಾರೆ. ಗಣೇಶ ಹಬ್ಬದಂದು ಶಿವನ ಭಕ್ತಿ ಗೀತೆ ಬಿಡುಗಡಯಾಗಿದ್ದು, ಮಂಗ್ಲಿ ಕಂಠದಲ್ಲಿ ಅಧ್ಬುತವಾಗಿ ಮೂಡಿಬಂದಿದೆ.
ವರದರಾಜ್ ಅವರು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ‘ಬೆಳ್ಳಿ ಬೆಟ್ಟವನಾಳೋನೆ’ ಸಾಲಿನಿಂದ ಶುರುವಾಗುವ ಈ ಗೀತೆಯನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ತೆಲುಗಿನ ಜಾನಪದ ಮತ್ತು ಭಕ್ತಿ ಗೀತೆಗಳ ಮೂಲಕ ಫೇಮಸ್ ಆಗಿದ್ದ ಮಂಗ್ಲಿ, ಇದೀಗ ಕನ್ನಡ ಭಕ್ತಿ ಗೀತೆ ಬಿಡುಗಡೆ ಮಾಡುವ ಮೂಲಕ ಕನ್ನಡದವರಿಗೂ ಹತ್ತಿರವಾಗುತ್ತಿದ್ದಾರೆ.
ಮಂಗ್ಲಿ ಈ ಹಿಂದೆ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಹಾಡಿಗೆ ಧ್ವನಿಯಾಗಿದ್ದರು. ನಂತರ ಪುಷ್ಪಾ ಸಿನಿಮಾದ ಕನ್ನಡದ ಡಬ್ಬಿಂಗ್ ನಲ್ಲಿ ಐಟಂ ಹಾಡನ್ನೂ ಮಂಗ್ಲಿ ಹಾಡಿದ್ದರು. ಅಷ್ಟೂ ಹಾಡುಗಳು ಸೂಪರ್ ಹಿಟ್ ಆಗಿವೆ.








