ಸದ್ಯ ದೇಶದಲ್ಲಿ ಮಾವಿನ ಹಣ್ಣಿನ ಫಸಲು(Mango) ಬರುವ ಸಮಯ. ಎಲ್ಲರೂ ಈಗ ಮಾವಿನ ಹಣ್ಣನ್ನು ಸವಿಯುತ್ತಿದ್ದಾರೆ. ತರಹೇವಾರಿ ಹಣ್ಣು ಖರೀದಿಸಿ ಜನರು ರುಚಿ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶ್ವದ ಅತೀ ದುಬಾರಿ ಹಣ್ಣಿನ ಬೆಲೆ ಕೇಳಿ ಜನರು ದಂಗಾಗಿದ್ದಾರೆ.
ಮಿಯಾಝಾಕಿ ಎಂಬ ಅತ್ಯಂತ ದುಬಾರಿ ಮಾವಿನ ಹಣ್ಣು ಈಗ ಕೊಪ್ಪಳದ(Koppala) ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಹಣ್ಣಿನ ಬೆಲೆ ಬರೋಬ್ಬರಿ 40,000 ರೂ. ಕೆಜಿಗೆ ಬರೋಬ್ಬರಿ 2.5 ಲಕ್ಷ ರೂ. ಕೊಪ್ಪಳ ಜಿಲ್ಲೆಯಲ್ಲಿ ಅದರ ಕೃಷಿಯನ್ನು ಜನಪ್ರಿಯಗೊಳಿಸಲು ತೋಟಗಾರಿಕಾ ಇಲಾಖೆ ಯೋಜಿಸುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದಿಂದ ಒಂದು ಮಿಯಾಜಾಕಿ ಮಾವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ತಳಿಯನ್ನು ಜಪಾನ್ ನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ನೂರಾರು ರೈತರು ಮಿಯಾಜಾಕಿ ಮಾವಿನ ತಳಿಯನ್ನು ವೀಕ್ಷಿಸಲೆಂದೇ ಬರುತ್ತಿದ್ದಾರೆ. ಮೇ 31 ರವರೆಗೆ ಮೇಳ ಮುಂದುವರಿಯುತ್ತದೆ. ಅನೇಕ ರೈತರು ಈ ದುಬಾರಿ ಮಾವಿನ ಜೊತೆ ಸೆಲ್ಫಿ ಮತ್ತು ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಮೇಳ ಪ್ರಾರಂಭವಾದ ನಂತರ ಕೆಂಪು ಮಿಯಾಜಾಕಿಯ ಚಿತ್ರಗಳು ವೈರಲ್ ಆಗಿವೆ.