Mann ki baat – ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಬಗ್ಗೆ ಮೋದಿ ಮೆಚ್ಚುಗೆ
ಬೆಂಗಳೂರು : ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಉತ್ಸಾಹ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದು, ಮನ್ ಕಿ ಬಾತ್ ಮಾಸಿಕ ಆಕಾಶವಾಣಿ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡರು.
ಈ ವೇಳೆ ಪ್ರಧಾನಿಗಳು, ಪರಿಸರದ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಜನರ ಸಂಖ್ಯೆ ದೇಶದಲ್ಲಿ ಕಡಿಮೆಯೇನಿಲ್ಲ. ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಉತ್ಸಾಹ ತುಂಬಿದೆ. ಸಹಕಾರನಗರದ ಒಂದು ಅರಣ್ಯವನ್ನು ಅವರು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ. 20 ವರ್ಷಗಳ ಹಿಂದೆ ಅವರು ನೆಟ್ಟ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ. ಸುರೇಶ್ ಕುಮಾರ್ ಮತ್ತೊಂದು ಅದ್ಭುತ ಕೆಲಸವನ್ನೂ ಮಾಡಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಸಹಕಾರ ನಗರದಲ್ಲಿ ಒಂದು ಬಸ್ ತಂಗುದಾಣವನ್ನು ಸಹ ನಿರ್ಮಿಸಿದ್ದಾರೆ. ನೂರಾರು ಜನರಿಗೆ ಕನ್ನಡ ಭಾಷೆಯಲ್ಲಿ ಬರೆಯಲಾಗಿರುವ ಫಲಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿ ಶಕ್ತಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿಸುವ ಆಧಾರವಾಗಿದೆ. ದೇಶವನ್ನು 2047ರವರೆಗೆ ಕರೆದೊಯ್ಯುವವರು ಯುಜನತೆಯೇ ಆಗಿದ್ದಾರೆ. ಇಂದಿನ ಯುವಜನಾಂಗ ದೇಶಕ್ಕಾಗಿ ಕೆಲಸ ಮಾಡುತ್ತಿರುವ ರೀತಿ, ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ವಿಧಾನ ಭರವಸೆ ಮೂಡಿಸುತ್ತಿದೆ. Hakathon ಗಳಲ್ಲಿ ಸಮಸ್ಯೆ ಪರಿಷ್ಕರಿಸುವುದು, ಹಲವಾರು ಗಂಟೆಗಳ ಕಾಲ ಕೆಲಸ ಮಾಡುವ ರೀತಿ ಪ್ರೇರಣಾದಾಯಕವಾಗಿದೆ. ಕಳೆದ ಹ್ಯಾಕಥಾನ್ ಗಳಲ್ಲಿ ಲಕ್ಷಾಂತರ ಯುವಕರು ಅನೇಕ ಸವಾಲುಗಳನ್ನು ಪರಿಹರಿಸಿದ್ದಾರೆ. ಹೊಸ ಪರಿಹಾರಗಳನ್ನು ನೀಡಿದ್ದಾರೆ ಎಂದು ಹೇಳಿದರು.