‘ಗೋಳಾಡಿದ ತಕ್ಷಣ ಸತ್ತವರು ವಾಪಸ್ ಬರುವುದಿಲ್ಲ’ – ವಿವಾದ ಮೈಮೇಲೆ ಎಳೆದುಕೊಂಡ ಹರಿಯಾಣ ಸಿಎಂ ಖತ್ತಾರ್..!
ಹರಿಯಾಣ : ದೇಶಾಸ್ವಯಂತ ಕೊರೊನಾ 2ನೇ ಅಬ್ಬರ ಜೋರಾಗಿದೆ. ಅದ್ರಕ್ಕೂ ಕೆಲ ರಾಜ್ಯಗಳಲ್ಲಿ ಕೊರೊನಾ ತಾಂಡವವಾಡ್ತಿದೆ. ಎಲ್ಲಿ ನೋಡಿದ್ರೂ ಸಾವು ನೋವಿನ ದೃಶ್ಯಗಳೇ ಕಂಡುಬರುತ್ತಿದೆ. ಜನ ಕೊರೊನಾದಿಂದ ಸಾಯುತ್ತಿದ್ದಾರೆ. ಅದೆಷ್ಟೋ ಜನ ಆಪ್ತರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ಸೆಲೆಬ್ರಿಟಿಗಳು ಹಾಗೂ ಜನಪ್ರತಿನಿಧಿಗಳೇ ಅನಾಗರಿಕರಂತೆ ವರ್ತಿಸುತ್ತಿದ್ದಾರೆ.
ಇದೇ ರೀತಿ ಹರಿಯಾಣ ಸಿಎಂ ಮನೋಹರ್ ಲಾಲ್ ಖತ್ತಾರ್, ಕೊರೊನಾದಿಂದಾಗಿ ಸಂಭವಿಸುತ್ತಿರುವ ಸಾವಿನ ಕುರಿತು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ‘ಕೊರೊನಾದಿಂದ ಎಷ್ಟು ಮಂದಿ ಸತ್ತಿದ್ದಾರೆ ಎಂಬುದನ್ನೇ ಪದೇ ಪದೇ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದಿದ್ದಾರೆ. ಈ ರೀತಿಯ ಬಿಕ್ಕಟ್ಟಿನಲ್ಲಿ ನಾವು ಅಂಕಿ ಸಂಖ್ಯೆಯ ಗೀಳು ಇಟ್ಟುಕೊಳ್ಳಬಾರದು. ಸದ್ಯಕ್ಕೆ ಸೋಂಕಿನಿಂದ ಜನರನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತಷ್ಟೇ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ‘ನಾವು ಎಷ್ಟೇ ಗೋಳಾಡಿದರೂ ಸತ್ತವರು ಯಾರೂ ವಾಪಸ್ ಬರುವುದಿಲ್ಲ. ನಾವು ಜನರನ್ನು ಸೋಂಕಿನಿಂದ ರಕ್ಷಿಸಲು ಏನೇನು ಪರ್ಯಾಯ ಮಾರ್ಗವಿದೆಯೋ ಅವನ್ನೆಲ್ಲಾ ಪ್ರಯತ್ನಿಸುತ್ತಿದ್ದೇವೆ. ನಮಗೆ ಎಲ್ಲರ ಬೆಂಬಲ ಬೇಕು’ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಮೋದೀಜಿಗೆ ದೇಶ ಮುನ್ನಡೆಸಲು ತಿಳಿದಿಲ್ಲ.. ಸಚಿನ್‌ಗೆ ಬ್ಯಾಟಿಂಗ್ ಮಾಡಲು ತಿಳಿದಿಲ್ಲ.. – ನೆಟ್ಟಿಗರಿಗೆ ಕಂಗನಾ ತಿರುಗೇಟು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ








