Manoj Tiwari : ಬಿಸಿಸಿಐ ಬಗ್ಗೆ ಮನೋಜ್ ತಿವಾರಿ ಬೇಸರ

1 min read

Manoj Tiwari : ಬಿಸಿಸಿಐ ಬಗ್ಗೆ ಮನೋಜ್ ತಿವಾರಿ ಬೇಸರ

ಪ್ರಸ್ತುತ ಬಿಸಿಸಿಐ ಆಟಗಾರರಿಗೆ ಬೆನ್ನೆಲುಬಾಗಿದೆ. 4 ರಿಂದ 5 ಪಂದ್ಯಗಳ್ಲಲಿ ವಿಫಲವಾದ್ರೂ ಮತ್ತೊಂದು ಅವಕಾಶ ನೀಡುತ್ತಿದೆ ಎಂದು ಬೆಂಗಾಲ್ ಕ್ರೀಡಾ ಖಾತೆ ಸಚಿವ, ಹಿರಿಯ ಕ್ರಿಕೆಟರ್ ಮನೋಜ್ ತಿವಾರಿ ಹೇಳಿದ್ದಾರೆ.

ನಾನು ಟೀಂ ಇಂಡಿಯಾ ಪರ ಆಡುತ್ತಿದ್ದ ಸಂದರ್ಭದಲ್ಲಿ ಈ ರೀತಿಯ ಮ್ಯಾನೆಜ್ ಮೆಂಟ್ ಇದ್ದಿದ್ದರೇ ನನ್ನನ್ನ ನಾನು ಸಾಬೀತುಪಡಿಸಿಕೊಳ್ಳಲು ಅವಕಾಶಗಳು ಸಿಗುತ್ತಿದ್ದವು ಎಂದಿದ್ದಾರೆ.

ಬೆಂಗಾಲ್ ಮೂಲದ ಮನೋಜ್ ತಿವಾರಿ, ಭಾರತ ಕ್ರಿಕೆಟ್ ತಂಡಕ್ಕೆ 2008 ರಲ್ಲಿ ಎಂಟ್ರಿ ಕೊಟ್ಟರು. ಇಲ್ಲಿಯವರೆಗೂ 12 ಏಕದಿನ ಪಂದ್ಯಗಳನ್ನಾಡಿರುವ ತಿವಾರಿ, ಮೂರು ಟಿ 20 ಪಂದ್ಯಗಳನ್ನಾಡಿದ್ದಾರೆ.

2011ರ ಡಿಸೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೊದಲ ಸೆಂಚೂರಿ ಸಿಡಿಸಿದ್ದರು. ಅಲ್ಲಿಂದ ಟೀಂ ಇಂಡಿಯಾಗೆ ಎಂಟ್ರಿ ಕೊಡಲು ಎದುರು ನೋಡುತ್ತಿದ್ದಾರೆ.

 ಹಳೆ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿದ ಮನೋಜ್ ತಿವಾರಿ, ವೆಸ್ಟ್ ಇಂಡೀಸ್ ಮ್ಯಾಚ್ ನಲ್ಲಿ ಸೆಂಚೂರಿ ಮಾಡಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದೆ.

Manoj-tiwari-scored-100-still-got-dropped saaksha tv
Manoj-tiwari-scored-100-still-got-dropped saaksha tv

ಆದ್ರೂ ಆ ನಂತರ ನನ್ನನ್ನು ತಂಡದಿಂದ ದೂರ ಇಟ್ಟರು. ಸತತ 14 ಮ್ಯಾಚ್ ಗಳಿಂದ ನನ್ನನ್ನು ದೂರ ಇಟ್ಟಿದ್ದು.

ಉತ್ತಮ ಪ್ರದರ್ಶನ ನೀಡಿದ್ದರೂ ನನ್ನನ್ನು ಯಾಕೆ ದೂರ ಇಟ್ಟರೂ ಅಂತಾ ಗೊತ್ತಾಗಲಿಲ್ಲ. ಒಂದು ವೇಳೆ ನನಗೆ ಚಾನ್ಸ್ ಸಿಕ್ಕರೇ ಸೆಲೆಕ್ಟರ್ ಗಳನ್ನು ಪ್ರಶ್ನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

14 ಪಂದ್ಯಗಳ ನನಗೆ ಅವಕಾಶ ಸಿಕ್ಕರೂ ನಾನು ರೀ ಎಂಟ್ರಿ ಕೊಟ್ಟ ಪಂದ್ಯದಲ್ಲಿ 65 ರನ್ ಗಳನ್ನು ಗಳಿಸಿದ್ದು ಮಾತ್ರವಲ್ಲದೇ 4 ವಿಕೆಟ್ ಪಡೆದುಕೊಂಡಿದ್ದೆ.

ಆದ್ರೂ ನನಗೆ ಸರಿಯಾದ ಅವಕಾಶಗಳು ಸಿಗಲಿಲ್ಲ ಎಂದು ಮನೋಜ್ ತಿವಾರಿ ಬೇಸರ ಹೊರಹಾಕಿದ್ದಾರೆ.

2021 – 2022 ರ ರಣಜಿ ಟ್ರೋಫಿಯಲ್ಲಿ ಬೆಂಗಾಲ್ ಪರ ಆಡಿದ್ದ ಮನೋಜ್ ಸೆಂಚೂರಿ ಸಿಡಿಸಿ ಮಿಂಚಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd