ಕೆ.ಎಲ್.ರಾಹುಲ್ ಕ್ಯಾಪ್ಟನ್ ಮೆಟಿರಿಯಲ್ ಅಲ್ಲವೇ ಅಲ್ಲ..!!
ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದರೂ ಭಾರೀ ಟೀಕೆಗೆ ಒಳಗಾಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿ ಸೋಲುತ್ತಿದ್ದಂತೆ ಕೆ.ಎಲ್.ರಾಹುಲ್ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ.
ಹೌದು..! ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು.
ಆದ್ರೆ ಮೂರು ಮ್ಯಾಚ್ ಗಳನ್ನು ಸೋತು ವೈಟ್ ವಾಶ್ ಆಯಿತು. ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸೋಲುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರಂತೆ ಹಿರಿಯ ಕ್ರಿಕೆಟಿಗರು, ರಾಹುಲ್ ಅವರನ್ನು ಟೀಕೆ ಮಾಡಲು ನಿಂತಿದ್ದಾರೆ.
ಅದರ ಮುಂದುವರೆದ ಭಾಗವಾಗಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ, ರಾಹುಲ್ ಅವರನ್ನು ನಾಯಕರನ್ನಾಗಿ ಘೋಷಿಸಿದ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮನೋಜ್ ತಿವಾರಿ, ನಾಯಕನನ್ನು ತಯಾರಿಸಲು ಆಗುವುದಿಲ್ಲ.
ಆತನಲ್ಲಿ ಸಹಜವಾಗಿಯೇ ನಾಯಕತ್ವ ಗುಣಗಳು ಇರಬೇಕು. ಅಸಲಿಗೆ ರಾಹುಲ್ ಕ್ಯಾಪ್ಟನ್ಸಿ ಮೆಟಿರಿಯಲ್ ಎಂದು ನಿಮಗೆ ಹೇಗೆ ಅನಿಸುತ್ತಿದೆ.
ಭವಿಷ್ಯದ ನಾಯಕನನ್ನು ತಯಾರಿಸೋದು ಅಂತಾ ಹೇಳುತ್ತಿದ್ದೀರಿ. ಕ್ಯಾಪ್ಟನ್ಸಿ ಸಹಜಸಿದ್ಧವಾಗಿರಬೇಕು. ಅವರು ಹೇಳಿದಂತೆ ನಾಯಕನನ್ನು ತಯಾರಿಸಲು ಆಗುವುದಿಲ್ಲ ಎಂದಿದ್ದಾರೆ.
ಇನ್ನು ನಮ್ಮಲ್ಲಿ ನಮ್ಮಲ್ಲಿ ಉತ್ತಮ ಆಟಗಾರರಿದ್ದಾರೆ. ಆದರೆ ಏಕದಿನ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿದ್ದೇವೆ.
ಆಯ್ಕೆಗಾರರ ತಪ್ಪು ನಿರ್ಧಾರಗಳಿಗೆ ಭಾರೀ ಬೆಲೆ ತೆರಬೇಕಾಯಿತು. ನಾಯಕರಾಗಿ ರಾಹುಲ್ ತಮ್ಮನ್ನ ಸಾಬೀತುಪಡಿಸಿಕೊಳ್ಳಲಿಲ್ಲ.
ಆದರೂ ರಾಹುಲ್ ಅವರಲ್ಲಿ ನಾಯಕನ ಯಾವ ಗುಣಗಳಿವೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಮನೋಜ್ ತಿವಾರಿ ಹೇಳಿದ್ದಾರೆ.