Maria Sharapova – ಮಗುವಿಗೆ ಜನ್ಮ ನೀಡಿದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ
ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ತಮ್ಮ 35ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾರೆ. ಮಗನಿಗೆ ಜನ್ಮ ನೀಡಿದ್ದಾರೆ. ಮಗುವಿನ ಚಿತ್ರವನ್ನು ಹಂಚಿಕೊಂಡಿರುವ ಶರಪೋವಾ ಮಗುವಿನ ಮಗುವಿನ ಹೆಸರನ್ನ ರಿವೀಲ್ ಮಾಡಿದ್ದಾರೆ. ಥಿಯೋಡರ್ ಎಂದು ನಾಮಕರಣ ಮಾಡಿದ್ದಾರೆ. ಮಗುವಿನ ತನ್ನ ಭಾವಿ ಪತಿ ಬ್ರಿಟನ್ನ ಅಲೆಕ್ಸಾಂಡರ್ ಗಿಲ್ಕೆಸ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಮರಿಯಾ ಶರಪೋವಾ ಮತ್ತು ಅಲೆಕ್ಸಾಂಡರ್ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಹಿಂದೆ ಇಬ್ಬರೂ ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿದ್ದರು.ನಮ್ಮ ಪುಟ್ಟ ಕುಟುಂಬ ಕೇಳಬಹುದಾದ ಅತ್ಯಂತ ಸುಂದರವಾದ, ಸವಾಲಿನ ಮತ್ತು ಲಾಭದಾಯಕ ಉಡುಗೊರೆ ಎಂದು ಶರಪೋವಾ ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶರಪೋವಾ ಮತ್ತು ಅಲೆಕ್ಸಾಂಡರ್ ತಮ್ಮ ಮಗುವಿಗೆ ಥಿಯೋಡರ್ ಎಂದು ಹೆಸರಿಟ್ಟಿದ್ದಾರೆ. ಇದು ಗ್ರೀಕ್ ಪದವಾಗಿದ್ದು ಇದರ ಅರ್ಥ. ದೇವರ ಕೊಡುಗೆ. ಮಗುವಿನ ಜನ್ಮ ದಿನಾಂಕವನ್ನ ರೋಮನ್ ಅಂಕೆಯಲ್ಲಿ ಜುಲೈ 1 ಎಂದು ಬರೆದುಕೊಂಡಿದ್ದಾರೆ.
ಐದು ಗ್ರ್ಯಾನ್ಸ್ಲಾಮ್ಗಳನ್ನು ಗೆದ್ದಿರುವ ಮರಿಯಾ ಶರಪೋವಾ ಈ ವರ್ಷದ ಏಪ್ರಿಲ್ 19 ರಂದು 35 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2020 ರಲ್ಲಿ ಆಸ್ಟ್ರೇಲಿಯನ್ ಓಪನ್ ಆಡಿದ ನಂತರ ಅವರು ಟೆನಿಸ್ಗೆ ವಿದಾಯ ಹೇಳಿದರು.