ಪಾಕಿಸ್ತಾನ ಸ್ಟೈಲ್ ಯೂಟ್ಯೂಬರ್ ಜ್ಯೋತಿ ಮಲ್ಲೋತ್ರಾ ಮತ್ತು ಪಾಕಿಸ್ತಾನ ಹೈ ಕಮಿಷನ್ ಅಧಿಕಾರಿಗಳ ನಡುವಿನ ಸಂಬಂಧ ಕುರಿತಂತೆ ಮತ್ತಷ್ಟು ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ರೂಪ ಪಡೆಯುತ್ತಿದ್ದು, ಇತ್ತೀಚೆಗೆ ಲೀಕ್ ಆದ ವಾಟ್ಸಾಪ್ ಚಾಟಿಂಗ್‌ಗಳು ಮಹತ್ವದ ಸತ್ಯಗಳನ್ನು ಬೆಳಕಿಗೆ ತಂದಿವೆ.
ಹೆಚ್ಚಿನ ಮಾಹಿತಿಯ ಪ್ರಕಾರ, ಜ್ಯೋತಿ ಮಲ್ಲೋತ್ರಾ ಪಾಕಿಸ್ತಾನ ಹೈ ಕಮಿಷನ್‌ಗೆ ಸೇರಿದ ಹಸನ್ ಅಲಿ ಎಂಬ ಅಧಿಕಾರಿಗೆ ನನ್ನನ್ನು ಪಾಕಿಸ್ತಾನದಲ್ಲಿ ಮದುವೆಯಾಗು ಎಂದು ಕೋರಿದ್ದಾಳೆ. ಈ ಮಾತುಗಳು ಅವರಿಬ್ಬರ ನಡುವೆ ನಡೆದ ವಾಟ್ಸಾಪ್ ಚಾಟಿಂಗ್‌ನಿಂದ ಪತ್ತೆಯಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ ಹೊರ ಹೋಗುವುದು ತನ್ನ ಪರ್ಸನಲ್ ಕಾರಣಗಳಿಂದ ಸಾಧ್ಯವಿಲ್ಲ ಎಂಬುದನ್ನೂ ಜ್ಯೋತಿ ಹೇಳಿದ್ದಾಳೆ.
ಚಾಟ್‌ನಲ್ಲಿ ಭಾರತದ ಅಂಡರ್‌ಕವರ್ ಆಪರೇಶನ್‌ಗಳ ಬಗ್ಗೆ ಚರ್ಚೆ ನಡೆದಿದ್ದು, ಇದು ಭದ್ರತೆ ಇಲಾಖೆಗಳ ಕಣ್ಣಿಗೆ ಬಿದ್ದಿದೆ. ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧವಿದೆ ಎಂಬ ಶಂಕೆಯ ಮೇಲೆ ತನಿಖೆ ಮುಂದುವರೆದಿದೆ.
ಅಷ್ಟೇ ಅಲ್ಲದೆ, ಜ್ಯೋತಿ ಮಲ್ಲೋತ್ರಾ ಹೆಸರಿನಲ್ಲಿ ನಾಲ್ಕು ಬೇರೆ ಬ್ಯಾಂಕ್ ಖಾತೆಗಳು ಇವೆ. ಈ ಖಾತೆಗಳಿಗೆ ದುಬೈನಿಂದ ನಿಯಮಿತವಾಗಿ ಹಣ ಜಮಾ ಆಗುತ್ತಿರುವುದನ್ನು ಐಎನ್‌ಎಸ್ ಅಥವಾ ಇಂಟೆಲಿಜೆನ್ಸ್ ಇಲಾಖೆ ಪತ್ತೆ ಹಚ್ಚಿದೆ. ಹಣದ ಮೂಲ ಮತ್ತು ಉದ್ದೇಶಗಳು ಏನೆಂಬುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ.
ಈ ಪ್ರಕರಣದಿಂದ ಭಾರತ-ಪಾಕಿಸ್ತಾನ ಸಂಬಂಧಗಳಿಗೆ ಹೊಸ ತಿರುವು ಸಿಕ್ಕಿದೆ. ಜ್ಯೋತಿಯ ಉದ್ದೇಶಗಳು ರಾಷ್ಟ್ರದ ಭದ್ರತೆಗೆ ವಿರುದ್ಧವಾಗಿದ್ದರೆ, ಇತರರೂ ಈ ಜಾಲದಲ್ಲಿ ಸಿಕ್ಕಿಕೊಂಡಿರಬಹುದೆಂಬ ಅನುಮಾನಗಳು ಹೆಚ್ಚುತ್ತಿವೆ.
ಪ್ರಸ್ತುತ ಜ್ಯೋತಿ ಮಲ್ಲೋತ್ರಾ ವಿರುದ್ಧ ದೇಶದ್ರೋಹ, ಹಣಕಾಸು ಅವ್ಯವಹಾರ ಮತ್ತು ಗೂಢಚರ್ಯೆ ಆರೋಪಗಳ ಭಾಗವಾಗಿ ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದ ಮತ್ತಷ್ಟು ಸಂಗತಿಗಳು ಹೊರ ಬರುವ ನಿರೀಕ್ಷೆ ಇದೆ.








