ಅಭಿಮಾನಿಗಳ ‘ದಾಸ’ನ ‘ಮೆಜೆಸ್ಟಿಕ್’ ತೆರೆಕಂಡು 19 ವರ್ಷ..!
ಚಂದನವನದ ಒಡೆಯ ದರ್ಶನ್ ಸಿನಿಮಾ ಹಾದಿ, ಜೀವನದ ಹಾದಿ ಅಷ್ಟು ಸುಲಭವಲ್ಲ. ಆದ್ರೂ ಅವರು ಕಷ್ಟಪಟ್ಟು ಇವತ್ತು ಇಷ್ಟು ದೊಡ್ಡ ಮಟ್ಟದ ನೇಮ್ ಫೇಮ್ ಗಳಿಸಿದ್ದಾರೆ. ಕರುನಾಟ ಅಭಿಮಾನಿಗಳ ಹೃದಯಗಳಲ್ಲಿ ಸ್ಥಾನ ಗಳಿಸಿದ್ದಾರೆ. ಅಪಾರ ಪ್ರಮಾಣದ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.
ಅಂದ್ಹಾಗೆ ದರ್ಶನ್ ನಾಯಕನಾಗಿ ತೆರೆಮೇಲೆ ಮಿಂಚುವ ಮೊದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಒಬ್ಬ ತಂತ್ರಜ್ಞನಾಗಿ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಪ್ರಾರಂಭಸಿದ್ದರು. ಆದರೆ ಅವರು ನಾಯಕನಾಗಿ ಮಿಂಚಿದ ಮೊದಲ ಸಿನಿಮಾ ಮೆಜೆಸ್ಟಿಕ್… ಈ ಸಿನಿಮಾದ ಬಳಿಕ ದರ್ಶನ್ ಹೆಸರು ಕನ್ನಡ ಸಿನಿಮಾರಂಗ , ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದೇ ಉಳಿದುಹೋಯ್ತು.
ಬಿಗ್ ಬಾಸ್ ಕನ್ನಡ – 8 : ಯಾವಾಗಿನಿಂದ ಆರಂಭದ : ಡೇಟ್ ಫಿಕ್ಸ್..!
ಈ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸಸ್ಟ್ರಿಗೆ ಮಾಸ್ ಹೀರೋ ಪಾದಾರ್ಪಣೆಯಾಯ್ತು. ಮಾಸ್ ಸಿನಿಮಾಗಳಿಗೆ ದರ್ಶನ್ ಕೇರ್ ಆಫ್ ಅಡ್ರೆಸ್ ಆದ್ರೂ. ಮಾಸ್ ಅಭಿಮಾನಿಗಳಿಗೆ ದರ್ಶನ್ ಆರಾಧ್ಯ ದೈವರಾದ್ರು. ಮಾಸ್ ಅಂದ್ರೆ ದರ್ಶನ್ – ದರ್ಶನ್ ಅಂದ್ರೆ ಮಾಸ್ ಅನ್ನೋ ಲೆವೆಲ್ ಗೆ ಜನರ ಮನೆ ಮನದಲ್ಲಿ ಸ್ಥಾನ ಪಡೆದ್ರು. ಸ್ಯಾಂಡಲ್ ವುಡ್ ನ ಡಿ ಬಾಸ್ ಆದ್ರೂ. ಇದೇ ಸಿನಿಮಾದಿಂದಲೇ ದಚ್ಚು ಅವರು ಎಲ್ಲರ ಅಚ್ಚು ಮೆಚ್ಚಾದ್ರು. ಕರುನಾಡ ಕಿಂಗ್ ಎನಿಸಿಕೊಂಡರು. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಪಾಲಿನ ದಾಸನಾದ್ರು. ಅಂದ್ಹಾಗೆ ಸ್ಯಾಂಡಲ್ ವುಡ್ ನ ಈ ಯಜಮಾನ ನಾಯಕನಾಗಿ ಸಿನಿಮಾರಂಕ್ಕೆ ಎಂಟ್ರಿಯಾಗಿ ಇಂದಿಗೆ 19 ವರ್ಷಗಳು ಕಳೆದಿವೆ. ಅಂದ್ರೆ ದರ್ಶನ್ ಹೀರೋ ಆಗಿ ಬಣ್ಣ ಹಚ್ಚಿದ ‘ಮೆಜೆಸ್ಟಿಕ್’ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 19ವರ್ಷಗಳು ಕಳೆದಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ‘ಮೆಜೆಸ್ಟಿಕ್’. 2002ರ ಫೆಬ್ರವರಿ 08ಕ್ಕೆ ‘ಮೆಜೆಸ್ಟಿಕ್’ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗಿತ್ತು. ಈ ಸಿನಿಮಾ ಬ್ಲಾಕ್ ಬಾಸ್ಟರ್ ಸೂಪರ್ ಹಿಟ್ ಆಗಿತ್ತು. ಪಿ ಎನ್ ಸತ್ಯ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾದಲ್ಲಿ, ರೇಖಾ ನಾಯಕಿಯಾಗಿ ಮಿಂಚಿದ್ದರು. ಪಕ್ಕಾ ಮಾಸ್ ಲುಕ್ ನಲ್ಲಿ ದಚ್ಚು ಸಿನಿಪ್ರಿಯರನ್ನ ಮನರಂಜಿಸಿದ್ರು. ಎಂ.ಜಿ.ರಾಮಮೂರ್ತಿ ಮತ್ತು ಬಾ.ಮಾ ಹರೀಶ್ ಸಿನಿಮಾಗೆ ಬಂಡವಾಳ ಹೂಡಿದ್ರು. ಸಾಧುಕೋಕಿಲಾ ಸಂಗೀತ ನೀಡಿದ್ರು.
‘ಸಲಾರ್’ ಗೆ ಕನ್ನಡದ ‘ಖಳನಾಯಕ’ – ಯಾರು ಆ ನಟ..!
ಆದ್ರೆ ನಾಯಕನಾಗಿ ಮಿಂಚುವುದಕ್ಕೂ ಮೊದಲೇ ದರ್ಶನ್ ಸಿನಿಬದುಕು ಆರಂಭವಾಗಿತ್ತು. ಮೆಜೆಸ್ಟಿಕ್ ಸಿನಿಮಾಗೂ ಮೊದಲು ದರ್ಶನ್ ಕೆಲ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದ್ದರೂ. ಆದ್ರೆ ನಾಯಕನಾಗಿ ಬಡ್ತಿ ಪಡೆದಿದ್ದು ಮೆಜೆಸ್ಟಿಕ್ ಸಿನಿಮಾ ಮೂಲಕ. ದರ್ಶನ್ ಖದರ್, ಇಮೇಜ್, ಅವರ ನೇಮ್ ಫೇಮ್, ಅವರ ನಸೀಬ್ ಬದಲಾಯಿಸಿದ ಸಿನಿಮಾ ಮೆಜೆಸ್ಟಿಕ್. ಅಲ್ಲಿಂದ ಶುರುವಾದ ದರ್ಶನ್ ಸಿನಿಮಾ ಜರ್ನಿ ಆರಂಭವಾಗಿತ್ತು. ಇಲ್ಲಿಯವರೆಗೂ ದಚ್ಚು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ದಾಸ, ಕರಿಯ, ಕಲಾಸಿಪಾಳ್ಯ ಸೇರಿ ಇನ್ನೂ ಹಲವಾರು ರೌಡಿಸಂ ಆಧರಿತ ಸಿನಿಮಾಗಳಲ್ಲಿ ನಟಿಸೋ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಸ್ ಹೀರೋ ಆಗಿಯೇ ಗುರುತಿಸಿಕೊಂಡಿದ್ದಾರೆ.
ದರ್ಶನ್ ಗೆ ನೇಮ್ ಫೇಮ್, ಹೀರೋ ಪಟ್ಟ ತಂದುಕೊಟ್ಟ ಮೆಜೆಸ್ಟಿಕ್ ಸಿನಿಮಾಗೆ 19 ವರ್ಷಗಳು ಪೂರ್ಣಗೊಂಡ ಸಂತಸದಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಸಿನಿಮಾ ಸಂಭ್ರಮಾಚರಣೆ ಮಾಡ್ತಾಯಿದ್ಧಾರೆ.
ಒಂದೇ ವೇದಿಕೆಯಲ್ಲಿ ಕಿಚ್ಚ-ದಚ್ಚು : `ಧ್ರುವಸರ್ಜಾ’ಗೆ ದಿಗ್ಗಜರು ಸಾಥ್..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel