ಉಡುಪಿ: ಕೊರೊನಾದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಸಾಮೂಹಿಕ ಪ್ರಾರ್ಥನೆ, ಸಮಾರಂಭಗಳಿಗೆ ಸರ್ಕಾರ ಕಡಿವಾಣ ಆಗಿದೆ. ಆದರೂ ಉಡುಪಿಯಲ್ಲಿ ನಿಯಮ ಮೀರಿ ಚರ್ಚ್ ವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಈ ಹಿನ್ನೆಲೆ ಫಾದರ್ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುಕೋಣೆ ಎಂಬಲ್ಲಿ ಈ ಘಟನೆ ನಡೆದಿದೆ. ಪಡುಕೋಣೆಯ ಸಂತ ಅಂತೋನಿ ಚರ್ಚ್ ನಲ್ಲಿ ಫಾದರ್ ಹಾಗೂ ಇತರೆ ಆರು ಮಂದಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ರು. ಈ ಬಗ್ಗೆ ಸ್ಥಳೀಯರು ದೂರವಾಣಿ ಮೂಲಕ ದೂರು ನೀಡಿದ್ರು. ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಪ್ರಾರ್ಥನೆ ಸಲ್ಲಿಸಿದ ಆರೋಪದ ಮೇಲೆ ಬೈಂದೂರು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ನೀಡಿದ ದೂರಿನಂತೆ ಸಂತ ಅಂತೋನಿ ಚರ್ಚ್ ಫಾದರ್ ಫ್ರೆಡ್ ಮಸ್ಕರಿಯನ್ ಹಾಗೂ 6 ಮಂದಿ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








