ಆಗ ತಾನೆ ಹುಟ್ಟಿದ ಮಗುವಿನ ದೇಹದಲ್ಲಿ 60 ಎಂಎಲ್ ನಷ್ಟು ನಿಕೋಟಿನ್ ಪತ್ತೆಯಾಗಿದ್ದು, ವೈದ್ಯ ಲೋಕವೇ ಆತಂಕ ವ್ಯಕ್ತಪಡಿಸಿದೆ.
ಈ ಮಗು ಹುಟ್ಟುತ್ತಿದ್ದಂತೆ ಅತ್ತಿಲ್ಲ. ಮೈಯೆಲ್ಲ ನೀಲಿ ಬಣ್ಣಕ್ಕೆ ತಿರುಗಿದೆ. ಹೀಗಾಗಿ ವೈದ್ಯರು ಕೂಡಲೇ ಮಗುವನ್ನು ಐಸಿಯುನಲ್ಲಿ ಇರಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಗ ವೈದ್ಯರು ಪರೀಕ್ಷಿಸಿದಾಗ ತಾಯಿಯ ತಂಬಾಕಿನ ಚಟ ಮಗುವಿಗೆ ಮಾರಕವಾಗಿದೆ ಎನ್ನುವುದು ತಿಳಿದು ಬಂದಿದೆ.
ಈ ಮಗುವಿನ ತಾಯಿ, ತಂಬಾಕು ವ್ಯಸನಿಯಾಗಿದ್ದಳು. ದಿನಕ್ಕೆ 10 ರಿಂದ 15 ಬಾರಿ ತಂಬಾಕು ಸೇವಿಸುತ್ತಿದ್ದಳು ಎನ್ನಲಾಗಿದ್ದು, ಆ ನಿಕೋಟಿನ್ ರಕ್ತದ ಮೂಲಕ ಭ್ರೂಣ ತಲುಪಿದೆ. ಗುಜರಾತ್ ನಲ್ಲಿ 2020ರ ವರದಿಯಂತೆ ಶೇ. ಶೇ.41ರಷ್ಟು ಪುರುಷರು ಹಾಗೂ ಶೇ.8.7ರಷ್ಟು ಮಹಿಳೆಯರು ತಂಬಾಕು ಸೇವಿಸುತ್ತಾರೆ. ಸದ್ಯ ವೈದ್ಯರ ಚಿಕಿತ್ಸೆಯಿಂದಾಗಿ ಮಗುವಿನ ಆರೋಗ್ಯ ಚೇತರಿಕೆಯಾಗುತ್ತಿದ್ದು, ನಾನು ಚಿಕ್ಕ ವಯಸ್ಸಿನಿಂದಲೇ ತಂಬಾಕು ತಿನ್ನುತ್ತೇನೆ. ಅದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಾಗಿಲ್ಲ ಎಂದು ಮಹಿಳೆ ಹೇಳಿದ್ದಾಳೆ.








