Matthew Hayden | ದಿನೇಶ್ ಕಾರ್ತಿಕ್ ರೋಲ್ ಯಾವುದು ?
ಟೀಂ ಇಂಡಿಯಾದ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗೆ ಫಿನಿಷರ್ ಅಂತಾ ಟ್ಯಾಗ್ ಕೊಟ್ಟು ಬಿಸಿಸಿಐ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
ಈ ವರ್ಷ ಐಪಿಎಲ್ ನಲ್ಲಿ ಆರ್ ಸಿಬಿ ಪರ ದಿನೇಶ್ ಕಾರ್ತಿಕ್ ಅಬ್ಬರಿಸಿದರು.
ಆ ಬಳಿಕ ಟೀಂ ಇಂಡಿಯಾದ ಪರ ಫಿನಿಷರ್ ಆಗಿ ಮಿಂಚಿದರು.
ಆದ್ರೆ ಕಳೆದ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ವೈಫಲ್ಯ ಅನುಭವಿಸಿದ್ದಾರೆ.
ಹೀಗಾಗಿ ದಿನೇಶ್ ಕಾರ್ತಿಕ್ ಸ್ಥಾನದ ಬಗ್ಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್ ಮಾಥ್ಯೂ ಹೆಡನ್ ಆಸಕ್ತಿದಾಯ ಕಮೆಂಟ್ ಗಳನ್ನು ಮಾಡಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಅವಮಾನಿಸಲೆಂದು ಅಲ್ಲ.
ಅಸಲಿಗೆ ಆತನ ರೋಲ್ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ.
ಫಿನಿಷರ್ ಅನ್ನೋರು ಬ್ಯಾಟರ್ ಗಳು ಎಲ್ಲಾ ಔಟ್ ಆದ ಬಳಿಕ ಕ್ರೀಸ್ ಗೆ ಬರ್ತಾರೆ.
ಆದ್ರೆ ಆಲ್ ರೌಂಡರ್ ಔಟ್ ಆದ ಬಳಿಕ ಕ್ರೀಸ್ ಗೆ ಬರುತ್ತಿದ್ದಾರೆ.
ಇದು ಹೀಗೆ ಮುಂದುವರೆದರೇ ರೋಹಿತ್ ಶರ್ಮಾ ಪ್ಲಾನ್ ವರ್ಕೌಟ್ ಆಗುವುದಿಲ್ಲ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಕಾರ್ತಿಕ್ ಗೆ ಪ್ರಮೊಷನ್ ನೀಡಬೇಕು.
ಟಿ 20 ವಿಶ್ವಕಪ್ ವರೆಗೂ ಕಾರ್ತಿಕ್ ಗೆ ಕೊಟ್ಟ ಫಿನಿಷರ್ ರೋಲ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯ ನಾಗ್ ಪುರ್ ನಲ್ಲಿ ನಡೆದಿದೆ.