ಆರ್ ಸಿಬಿ ಕ್ಯಾಪ್ಟನ್ ಆಗಿ ಮ್ಯಾಕ್ಸ್ ವೆಲ್ ಬೆಸ್ಟ್ ಜಾಯ್ಸ್.. Maxwell saaksha tv
15ನೇ ಆವೃತ್ತಿಗಾಗಿ ಐಪಿಎಲ್ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈಗಾಗಲೇ ತಮಗೆ ಬೇಕಾದ ಆಟಗಾರರನ್ನು ರೀಟೈನ್ಡ್ ಮಾಡಿಕೊಂಡಿರುವ 8 ಫ್ರಾಂಚೈಸಿಗಳು ಮೆಗಾ ಹರಾಜಿಗಾಗಿ ಎದುರು ನೋಡುತ್ತಿವೆ. ಇತ್ತ ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಹರಾಜುಗು ಮುನ್ನಾ ತಲಾ ಮೂವರು ಆಟಗಾರರನ್ನ ಖರೀದಿ ಮಾಡಿಕೊಳ್ಳಬೇಕಿದೆ.
ಮುಖ್ಯವಾಗಿ ತಂಡಗಳ ನಾಯಕರನ್ನ ಈ ತಂಡಗಳು ಖರೀದಿ ಮಾಡಬೇಕಿದೆ. ಮೂಲಗಳ ಪ್ರಕಾರ ಲಕ್ನೋಗೆ ಕೆ.ಎಲ್.ರಾಹುಲ್ ನಾಯಕತ್ವ ವಹಿಸಲಿದ್ದು, ಶ್ರೇಯಸ್ ಅಯ್ಯರ್ ಅಹಮದಾಬಾದ್ ತಂಡದ ಪಾಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಐಪಿಎಲ್ ನ ರಜಿನಿ ಕಾಂತ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ನಾಯಕನ ಹುಡುಕಾಟದಲ್ಲಿದೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರೋದು ಆರ್ ಸಿಬಿಗೆ ತಲೆನೋವು ತಂದೊಡ್ಡಿದೆ. ಮುಂದಿನ ಆವೃತ್ತಿಯಿಂದ ಆರ್ ಸಿಬಿಗೆ ನಾಯಕ ಯಾರಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ನಡುವೆ ಆರ್ ಸಿಬಿ ಮೆಗಾ ಹಜಾರಿನಲ್ಲಿ ಡೇವಿಡ್ ವಾರ್ನರ್ ಅವರನ್ನ ಖರೀದಿಸಿ ಕ್ಯಾಪ್ಟನ್ ಪಟ್ಟ ನೀಡಬೇಕು ಅನ್ನೋ ಚಿಂತನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಆದ್ರೆ ಡೇವಿಡ್ ವಾರ್ನರ್ ಮೆಗಾ ಹರಾಜಿ ಬರೋದು ಅನುಮಾನವಾಗಿದೆ. ಹೀಗಾಗಿ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಗೆ ಆರ್ ಸಿಬಿ ನಾಯಕತ್ವ ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಆರ್ ಸಿಬಿ ತಂಡದಲ್ಲಿರುವ ಮ್ಯಾಕ್ಸ್ ವೆಲ್ ಗೆ ಕ್ಯಾಪ್ಟನ್ಸಿ ಜವಾಬ್ದಾರಿ ವಹಿಸಿದರೇ ಸೂಕ್ತ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಅಂದಹಾಗೇ ಮ್ಯಾಕ್ಸ್ ವೆಲ್ ಗೆ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ನಾಯಕತ್ವ ವಹಿಸಿದ ಅನುಭವವಿದೆ. ಸದ್ಯ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ತಂಡವನ್ನು ಮುನ್ನಡೆಸುತ್ತಿರುವ ಮ್ಯಾಕ್ಸಿ, ಬ್ಯಾಟಿಂಗ್ ನಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನ ನೋಡಿದ್ರೆ ಆಟಗಾರನಾಗಿ ಮ್ಯಾಕ್ಸ್ ವೆಲ್ ಪ್ರಬುದ್ಧನಾಗಿದ್ದು, ಕ್ಯಾಪ್ಟನ್ಸಿ ಒತ್ತಡದಲ್ಲೂ ಉತ್ತಮವಾಗಿ ಬ್ಯಾಟ್ ಬೀಸಬಲ್ಲರು ಎಂದು ತಿಳಿದು ಬರುತ್ತಿದೆ. ಹೀಗಾಗಿ ಒಳ್ಳೆ ಜೋಷ್ ನಲ್ಲಿರುವ ಮ್ಯಾಕ್ಸ್ ವೆಲ್ ಗೆ ಆರ್ ಸಿಬಿ ನಾಯಕತ್ವ ವಹಿಸಿದರೇ ಸೂಕ್ತ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.