Mayank Agarwal: ಗಂಡು ಮಗುವಿಗೆ ತಂದೆಯಾದ ಮಯಾಂಕ್ ಅಗರ್ವಾಲ್ ದಂಪತಿಗಳು…
ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಮತ್ತು ಅವರ ಪತ್ನಿ ಅಶಿತ ಸೂದ್ ದಂಪತಿಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರವನ್ನ ಮಯಾಂಕ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹಲವು ವರ್ಷಗಳ ಡೇಟಿಂಗ್ ನಂತರ ಜೂನ್ 4 2018 ರಂದು ಮಯಾಂಕ್ ಅಶಿತಾ ಅವರನ್ನ ವಿವಾಹವಾಗಿದ್ದರು. ಮದುವೆಯಾಗಿ ನಾಲ್ಕು ವರ್ಷಗಳ ನಂತರ ಮೊದಲ ಮಗುವನ್ನ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ. ದಂಪತಿಗಳು ಮಗುವಿಗೆ ಆಯನ್ಶ್ ಎಂದು ಹೆಸರಿಟ್ಟಿದ್ದಾರೆ.
ಗಂಡು ಮಗುವಿಗೆ ತಂದೆಯಾದ ಮಯಾಂಕ್ ಅಗರ್ವಾಲ್ಗೆ ಟೀಂ ಇಂಡಿಯಾದ ಹಲವು ಆಟಗಾರರು ಶುಭಾಷಯ ಕೋರಿದ್ದಾರೆ. ಮಯಾಂಕ್ ಪೋಸ್ಟ್ ಕುರಿತು ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ‘ನಿಮ್ಮಿಬ್ಬರಿಗೂ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿಯೊಂದಿಗೆ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್, ಅಜಿಂಕ್ಯಾ ರಹಾನೆ ಮತ್ತು ಅವರ ಪತ್ನಿ ಕೂಡ ದಂಪತಿಗೆ ಶುಭ ಹಾರೈಸಿದ್ದಾರೆ.
ಮಯಾಂಕ್ ಇದುವರೆಗೆ 21 ಟೆಸ್ಟ್‌ಗಳಲ್ಲಿ ಆಡಿದ್ದು ಭಾರತದ ಪರ ಬ್ಯಾಟ್ ಬೀಸಿದ್ದುಯ, 41.33 ಸರಾಸರಿಯಲ್ಲಿ 1488 ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ 4 ಟೆಸ್ಟ್ ಶತಕಗಳು ಮತ್ತು 2 ದ್ವಿಶತಕಗಳು ಮತ್ತು ಆರು ಅರ್ಧಶತಕಗಳನ್ನ ದಾಖಲಿಸಿದ್ದಾರೆ.
Mayank Agarwal: Father of a baby boy, Mayank Agarwal couple…








