Meatball | ಮನುಷ್ಯರೆಲ್ಲರೂ ಒಟ್ಟಾದರೇ… ಕಿಲೋಮೀಟರ್ ಮಾಂಸದ ಉಂಡೆ
ಭೂಮಿ ಮೇಲೆ ಒಟ್ಟು ಜನಸಂಖ್ಯೆ ಹೆಚ್ಚು ಕಡಿಮೆ 780 ಕೋಟಿ. ಅವರೆಲ್ಲರನ್ನೂ ಒಂದು ಗಟ್ಟಿ ಉಂಡೆಯಾಗಿ ಮಾಡಿದ್ರೆ ಸುಮಾರು ಒಂದು ಕಿಲೋಮೀಟರ್ ಅಗಲದ ಮಾಂಸದ ದೊಡ್ಡ ಉಂಡೆಯಾಗುತ್ತದೆಯಂತೆ.
ಅಮೇರಿಕನ್ ಗಣಿತಜ್ಞರು, ಮಾನವ ದೇಹದ ಸಾಂದ್ರತೆಯು ಘನ ಮೀಟರ್‌ಗೆ 985 ಕೆಜಿ ಆಗಿದ್ದು, ಸರಾಸರಿ ಪ್ರತಿವೊಬ್ಬರ ತೂಕ 62 ಕೆಜಿಯಾಗಿ ಲೆಕ್ಕಿಸಿದ್ರೆ ಎಲ್ಲರನ್ನೂ ಸೇರಿಸಿದ್ರೆ ಎಷ್ಟು ದೊಡ್ಡ ಮಾಂಸದ ಉಂಡೆಯಾಗುತ್ತದೆ ಎಂದು ಅಂದಾಜಿಸಿದ್ದಾರೆ.

ಆ ಮಾಂಸದ ಉಂಡೆ ಈಫಿಲ್ ಟವರ್ ಗಿಂತಲೂ ಮೂರು ಪಟ್ಟು ಇಲ್ಲವೇ ನ್ಯೂಯಾರ್ಕ್ ನಲ್ಲಿನ ಸೆಂಟ್ರಲ್ ಪಾರ್ಕ್ ನ ಅಗಲದಷ್ಟು ಇರಬಹುದು ಎಂದು ಹೇಳಿದ್ದಾರೆ.
ಇದನ್ನ ಒಟ್ಟಾರೆ ಭೂಮಿ ಜೊತೆ ಹೋಲಿಸಿದ್ರೆ ದೊಡ್ಡ ಬೆಟ್ಟದ ಮುಂದೆ ಸಾಸಿವೆಯಷ್ಟಿರುತ್ತದೆಯಂತೆ.
ಇನ್ನು ಇದರ ಬಗ್ಗೆ ಆ ಗಣಿತಜ್ಞರು ಒಂದು ಮಾತನಾಡಿದ್ದು, ಇಷ್ಟು ಚಿಕ್ಕ ಮಾಂಸದ ಮುದ್ದೆಯನ್ನು ಮೇಯಲು ಮನುಷ್ಯರು ಇಷ್ಟು ದೊಡ್ಡ ಭೂಮಿಯನ್ನು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.