ಆರ್ ಸಿಬಿ ಸೇರಿದ ಟಿಮ್ ಡೇವಿಡ್ ಯಾರು ಗೊತ್ತಾ..?
ನವದೆಹಲಿ : ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದ್ವಿತೀಯಾರ್ಧದ ಐಪಿಎಲ್ ಗೆ ತಮ್ಮ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ.
ನ್ಯೂಜಿಲೆಂಡ್ ನ ಯುವ ಆಟಗಾರ ಫಿನ್ ಅಲೆನ್ ಬದಲಿಗೆ ಆರ್ ಸಿಬಿ ಸಿಂಗಾಪುರ್ ನ ಟಿಮ್ ಡೇವಿಡ್ ಅವರನ್ನ ಆಯ್ಕೆ ಮಾಡಿಕೊಂಡಿದೆ.
ಇದರೊಂದಿಗೆ ಡೇವಿಡ್ ಐಪಿಎಲ್‍ನಲ್ಲಿ ಪಾಲ್ಗೊಳ್ಳುತ್ತಿರುವ ಸಿಂಗಾಪುರ್‍ನ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಿ ಗುರುತಿಸಿಕೊಳ್ಳಲಿದ್ದಾರೆ.
ಅಂದಹಾಗೆ ಟಿಮ್ ಡೇವಿಡ್ ಈಗಾಗಲೇ ಬಿಬಿಎಲ್, ಪಿಎಸ್ ಎಲ್, ಟಿ20 ಬ್ಲಾಸ್ಟ್ ಮತ್ತು ಸಿಪಿಎಲ್ ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಆದ್ರೆ ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‍ನ ದ್ವಿತೀಯ ಹಂತದಲ್ಲೂ ಅವಕಾಶ ಪಡೆಯುವ ಮೂಲಕ ವಿಶೇಷ ದಾಖಲೆಗೆ ಪಾತ್ರರಾಗಲಿದ್ದಾರೆ.
ಇನ್ನು ಡೇವಿಡ್ ಸಿಂಗಾಪುರ್ ತಂಡದ ಪರ 14 ಟಿ20 ಪಂದ್ಯಗಳನ್ನ ಆಡಿದ್ದು 4 ಅರ್ಧಶತಕದ ಸಹಿತ 558 ರನ್ ಸಿಡಿಸಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ 50 ಪಂದ್ಯಗಳನ್ನಾಡಿದ್ದು, 6 ಅರ್ಧಶತಕಗಳ ಸಹಿತ 155.84ರ ಸ್ಟ್ರೈಕ್ ರೇಟ್ ನಲ್ಲಿ 1186 ರನ್ ಗಳಿಸಿದ್ದಾರೆ. ಸದ್ಯ ಅವರು ಇಂಗ್ಲೆಂಡಿನಲ್ಲಿದ್ದು, ರಾಯಲ್ ಲಂಡನ್ ಏಕದಿನ ಕಪ್‍ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಮತ್ತು ಅರ್ಧ ಶತಕ ಸಿಡಿಸಿ ಉತ್ತಮ ಲಯದಲ್ಲಿದ್ದಾರೆ.