ಪವರ್ ಸ್ಟಾರ್ ಎಂದು ಟೈಟಲ್ ಇಟ್ಟು, ಶಾರ್ಟ್ ಫಿಲಂ ತೆಗೆದು ಸದ್ದು ಮಾಡಿದ್ದ ಕಾಂಟ್ರವರ್ಸಿಯಲ್ ಕಿಂಗ್ ರಾಮ್ ಗೋಪಾಲ್ ವರ್ಮಾ, ಇದೀಗ ಮೆಗಾ ಫ್ಯಾಮಿಲಿಗೆ ಸಂಬಂಧಿಸಿದಂತೆ ಮತ್ತೊಂದು ಚಿತ್ರ ಮಾಡಲು ಮುಂದಾಗಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಆರ್ ಜಿವಿ, ತಮ್ಮ ವೆಬ್ ಸಿರೀಸ್ ಗೆ “ಅಲ್ಲು” ಎಂಬ ಟೈಟಲ್ ಫಿಕ್ಸ್ ಮಾಡಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ “ಅಲ್ಲು” ಅಂದರೆ ಇಲ್ಲಿ ವರ್ಮಾ, ನಿರ್ಮಾಪಕ, ಚಿರಂಜೀವಿ ಬಾಮೈದ, ಅಲ್ಲು ಅರ್ಜುನ್ ರ ತಂದೆ “ಅಲ್ಲು ಅರವಿಂದ್” ಬಗ್ಗೆ ತಮ್ಮ ವೆಬ್ ಸಿರೀಸ್ ನಲ್ಲಿ ಹೇಳಲು ಹೊರಟಿದ್ದಾರೆ. “ಅಲ್ಲು” ಅಂದರೆ ಕನ್ನಡದಲ್ಲಿ ನೇಯುವಿಕೆ ಎಂದರ್ಥ.
ಇದೊಂದು ಕಾಲ್ಪನಿಕ ಕಥೆ. ಬಹುದೊಡ್ಡ ಸ್ಟಾರ್‌ನ ಕುಟುಂಬಕ್ಕೆ ಭಾಮೈದನೊಬ್ಬ ಏನು ಮಾಡುತ್ತಾನೆ ಎನ್ನುವುದು ಇದರ ಕಥೆ. ಈ ಚಿತ್ರದ ಕಥೆಯು ಆ ಸ್ಟಾರ್ ತನ್ನ ‘ಜನ ರಾಜ್ಯಂ’ ಪಕ್ಷ ಘೋಷಣೆ ಮಾಡಿದ ನಂತರ ಶುರುವಾಗುತ್ತದೆ’ ಎಂದು ವರ್ಮಾ ತಿಳಿಸಿದ್ದಾರೆ.
ಆರ್ ಜಿವಿ ಟ್ವೀಟ್ ನಲ್ಲಿ.. “ಅಲ್ಲು” ಅನ್ನೋ ಟೈಟಲ್ ಇಡಲು ಕಾರಣ, ಈ ವೆಬ್ ಸಿರೀಸ್ ನಲ್ಲಿ ಮುಖ್ಯಪಾತ್ರಧಾರಿ ವಿವಿಧವಾದ ಪ್ಲಾನ್ ಗಳನ್ನ ಹೆಣೆಯುತ್ತಲೇ ಇರುತ್ತಾನೆ.”
ಆತನಿಗೆ ಒಳ್ಳೆಯದಾಗಬೇಕೆಂದರೇ ಪ್ಲಾನ್. ಬೇರೊಬ್ಬರಿಗೆ ಕೆಟ್ಟದಾಗಬೇಕೆಂದರೂ ಪ್ಲಾನ್.. ಮಾಡುತ್ತಲೇ ಇರುತ್ತಾನೆ. ಬಹುದೊಡ್ಡ ಸ್ಟಾರ್ ಹೀರೋನ ಬಾಮೈದ. ಆತನ ಮೈಲೇಜ್ ಕಡಿಮೆಯಾಗದಂತೆ ಈತ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ. ಅಲ್ಲು ಬಹು ಚಾಣಾಕ್ಷ. ತನಗೆ ಅಥವಾ ತನ್ನ ಕುಟುಂಬಕ್ಕೆ ಲಾಭ ಆಗುವಂತೆ ಅಥವಾ ವಿರೋಧಿಗಳಿಗೆ ಕಷ್ಟವಾಗುವಂಥದ್ದೇನಾದರೂ ಒಂದನ್ನು ಯೋಚಿಸುತ್ತಲೇ ಇರುತ್ತಾನೆ. ಪ್ಲ್ಯಾನ್‌ಗಳ ಹಿಂದಿನ ಮಾಸ್ಟರ್ ಮೈಂಡ್ ಆತ ಎಂದಿದ್ದಾರೆ.
ಅಲ್ಲದೆ ಎ. ಅರವಿಂದ್, ಎ. ಚಿರಾಂಜೀವಿ, ಪ್ರವಣ್ ಕಲ್ಯಾಣ್, ಎ. ಆರ್ಜುನ್, ಎ. ಶೀರೇಶ್, ಕೆ.ಆರ್. ಚ್ರರಣ್, ಎನ್ ಬಾಯೆಬು ಮುಂತಾದವು ನನ್ನ ಚಿತ್ರದ ಪಾತ್ರಗಳಾಗಿವೆ ಎಂದು ಪಾತ್ರಗಳನ್ನು ಪರಿಚಯಿಸಿದ್ದಾರೆ.