Mega T20 IPL-2022 – ಬಸ್ ಡ್ರೈವರ್ ಆದ ಧೋನಿ , ರೌಡಿ ಲುಕ್ ಗೆ ಫ್ಯಾನ್ಸ್ ಫಿದಾ
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 26ರಿಂದ ಆರಂಭವಾಗಲಿದೆ. ಈಗಾಗಲೇ ಫ್ರಾಂಚೈಸಿಗಳು 2022ರ ಟೂರ್ನಿಗೆ ಭರದ ಸಿದ್ದತೆಗಳು ನಡೆಸುತ್ತಿವೆ. ಇನ್ನೊಂದೆಡೆ 2022ನೇ ಸಾಲಿನ ಐಪಿಎಲ್ ಟೂರ್ನಿಯ ಪ್ರೊಮೋ ಕೂಡ ರಿಲೀಸ್ ಆಗಿದೆ. ಈ ಪ್ರೊಮೋದಲ್ಲಿ ಧೋನಿ ಬಸ್ ಡ್ರೈವರ್ ಆಗಿ ಮಿಂಚಿದ್ದಾರೆ. ಸಿಎಸ್ ಕೆ ತಂಡದ ನಾಯಕನಾಗಿರುವ ಧೋನಿಯ ಈ ಲುಕ್ ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ.
ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧೋನಿಯ ಗೆಟಪ್ ಗೆ ಧೋನಿ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ. ಪ್ರತಿ ಐಪಿಎಲ್ ನಲ್ಲೂ ವಿಭಿನ್ನ ಗೆಟಪ್ ನಲ್ಲಿ ಧೋನಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 15ನೇ ಐಪಿಎಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದೆ. ಮುಂದಿನ ಎರಡು ತಿಂಗಳು ಭಾರತದಲ್ಲಿ ಐಪಿಎಲ್ ಹಬ್ಬ ಜೋರಾಗಿಯೇ ನಡೆಯಲಿದೆ.
ಸುಮಾರು 1 ನಿಮಿಷದ ಈ ಪ್ರೋಮೋದಲ್ಲಿ ಧೋನಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.. ಟ್ರಾಫಿಕ್ ನಡುವೆಯೂ ಐಪಿಲ್ ಕ್ರೇಜ್ ತೋರಿಸುವಂತಿದೆ ಈ ಪ್ರೋಮೋ.. ಸಿಎಕೆಯ ಸಿಂಗಂ ವಿಡಿಯೋದಲ್ಲಿ ಕಂಪ್ಲೀಟ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ..
When it's the #TATAIPL, fans can go to any extent to catch the action – kyunki #YehAbNormalHai!
What are you expecting from the new season?@StarSportsIndia | @disneyplus pic.twitter.com/WPMZrbQ9sd
— IndianPremierLeague (@IPL) March 4, 2022