Chiranjeevi : ಮಹತ್ವದ ನಿರ್ಧಾರ ತೆಗೆದುಕೊಂಡ ಮೆಗಾಸ್ಟಾರ್ !
ಮೆಗಾಸ್ಟಾರ್ ಚಿರಂಜೀವಿ ಸತತ ಸಿನಿಮಾಗಳ ಮೂಲಕ ಫುಲ್ ಬ್ಯುಸಿಯಾಗಿದ್ದಾರೆ.
ಮೋಹನ್ ರಾಜಾ ನಿರ್ದೇಶನದ ಗಾಡ್ ಫಾದರ್ ರಿಲೀಸ್ ಗೆ ರೆಡಿಯಾಗಿದೆ.
ಮತ್ತೊಂದು ಕಡೆ ಮೇಹರ್ ರಮೇಶ್ ತಯಾರಿಸುತ್ತಿರುವ ಭೋಳಾಶಂಕರ್ ಶೂಟಿಂಗ್ ಕೂಡ ಕೊನೆಯ ಹಂತದಲ್ಲಿ ಇದೆ.
ಇನ್ನು ಬಾಬಿ ನಿರ್ದೇಶನದ ಸಿನಿಮಾವನ್ನು ಕೂಡ ಆದಷ್ಟು ಬೇಗ ಪೂರ್ತಿ ಮಾಡಬೇಕು ಎಂದು ಚಿರಂಜೀವಿ ಭಾವಿಸುತ್ತಿದ್ದಾರೆ.
ಕೈಯಲ್ಲಿರುವ ಮೂರು ಸಿನಿಮಾಗಳು ಮಾತ್ರವಲ್ಲದೇ ಮತ್ತೆರಡು ಸಿನಿಮಾಗಳನ್ನು ಶೀಘ್ರದಲ್ಲಿಯೇ ಅನೌನ್ಸ್ ಮಾಡಲಿದ್ದಾರೆ.

ಹೀಗೆ ಸಾಕಷ್ಟು ಬುಸಿಯಲ್ಲಿರುವ ಚಿರು, ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲಿಯೇ ಅವರು ಡಿಜಿಟಲ್ ಎಂಟ್ರಿ ಕೊಡಲಿದ್ದಾರೆ.
ಪ್ರಸ್ತುತ ಪ್ರೇಕ್ಷಕರು ಥಿಯೇಟರ್ ಗಿಂತ ಓಟಿಟಿ ಯಲ್ಲಿ ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದಾರೆ.
ಹೀಗಾಗಿ ದೊಡ್ಡ ದೊಡ್ಡ ಹೀರೋಗಳು ಕೂಡ ಓಟಿಟಿ ಸಿನಿಮಾ, ವೆಬ್ ಸಿರೀಸ್ ಗೆ ಸೈ ಎನ್ನುತ್ತಿದ್ದಾರೆ.
ಅದರಂತೆ ಇದೀಗ ಮೆಗಾಸ್ಟಾರ್ ಚಿರಂಜೀವಿ ಕೂಡ ಓಟಿಟಿಗೋಸ್ಕರ ವೆಬ್ ಸಿರೀಸ್ ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಇತ್ತೀಚಿಗೆ ಒಟಿಟಿ ಸಂಸ್ಥೆ ಚಿರಂಜೀವಿ ಅವರನ್ನ ಸಂಪರ್ಕಿಸಿದ್ದು, ಕಥೆಯನ್ನು ಹೇಳಿದ್ದಾರಂತೆ.
ಕಥೆ ಕೇಳಿದ ಚಿರು ತಮ್ಮ ಸ್ಟಾರ್ ಡಮ್ ಬಿಟ್ಟು ವಿಭಿನ್ನ ಪವರ್ ಫುಲ್ ಪಾತ್ರವನ್ನು ಬರೆದುಕೊಂಡು ಬರುವಂತೆ ಕಥೆಗಾರರಿಗೆ ಹೇಳಿದ್ದಾರಂತೆ.