ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಹಲವು ರಾಜಕೀಯ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಆ ಲಿಸ್ಟ್‍ನಲ್ಲಿ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮಫ್ತಿ ಸಹ ಒಬ್ಬರು. ಒಂದು ತಿಂಗಳ ಹಿಂದೆ ಮಾಜಿ ಸಿಎಂ ಒಮರ್ ಅಬ್ದುಲ್ಲಾ , ಮಾಜಿ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಅವರನ್ನು ಷರತ್ತುಬದ್ಧ ಅನುಮತಿ ಮೇರೆಗೆ ಬಿಡುಗಡೆ ಗೃಹಬಂಧನದಿಂದ ಮುಕ್ತಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಪೀಪಲ್ಸ್ ಪಕ್ಷದ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಸಜ್ಜದ್ ಲೋನ್ ರನ್ನೂ ಸಹ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 5 ರಂದು ಮಫ್ತಿ ಮೆಹಬೂಬಾ ಅವರ ಗೃಹಬಂಧನದ ಅವಧಿ ಮುಗಿಯಬೇಕಿತ್ತು. ಹೀಗಾಗಿ ಮೆಹಬೂಬಾ ಮಫ್ತಿಗೂ ಬಿಡುಗಡೆ ಬಾಗ್ಯ ಸಿಗುತ್ತೆ ಎನ್ನಲಾಗ್ತಿತ್ತು. ಆದ್ರೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿಯಲ್ಲಿ ಮೆಹಬೂಬಾ ಮಫ್ತಿ ಅವರ ಗೃಹಬಂಧನದ ಅವಧಿಯನ್ನು ಮತ್ತೆ 3 ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.
S R Srinivas : ಶಾಸಕ ಸ್ಥಾನಕ್ಕೆ ಗುಬ್ಬಿ ಶಾಸಕ ರಾಜೀನಾಮೆ ; ಜೆಡಿಎಸ್ ಪಕ್ಷ ತೊರೆಯಲು ಮುಂದಾದ ಕಾರ್ಯಕರ್ತರು….
S R Srinivas : ಶಾಸಕ ಸ್ಥಾನಕ್ಕೆ ಗುಬ್ಬಿ ಶಾಸಕ ರಾಜೀನಾಮೆ ; ಜೆಡಿಎಸ್ ಪಕ್ಷ ತೊರೆಯಲು ಮುಂದಾದ ಕಾರ್ಯಕರ್ತರು…. ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ...