ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ರದ್ದು. ಐದೇ ದಿನಕ್ಕೆ ಇತಿಶ್ರೀ…
ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ಪಕ್ಷ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನ ಕಾಂಗ್ರೆಸ್ ಕೊನೆಗೂ ರದ್ದುಗೊಳಿಸಿದೆ.
ಹೈಕೋರ್ಟ್ ನೊಟೀಸ್ ನೀಡಿದ ಬೆನ್ನಲ್ಲೆ ಸರ್ಕಾರ ಮೇಕೆದಾಟ ಪಾದಯಾತ್ರೆಯನ್ನ ನಿಲ್ಲಿಸುವಂತೆ ದೇಶ ಹೊರಡಿಸಿತತ್ತು. ರಾಮನಗರದ ಎ ಸಿ ಮತ್ತು ಡಿವೈಎಸ್ ಪಿ ಅಧಿಕಾರಿಗಳ ತಂಡ ಡಿ ಕೆ ಶಿವಕುಮಾರ್ ಅವರ ಮನೆಗೆ ಬೇಟಿ ನೀಡಿ ನೊಟೀಸ್ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಪಕ್ಷದ ಹೆಚ್ಚಿನ ನಾಯಕರು ಪಾದಯಾತ್ರೆ ಕೈ ಬಿಡುವಂತೆ ಇಲವು ವ್ಯಕ್ತಪಡಿಸಿದ್ದರಿಂದ ಪಾದಯಾತ್ರೆಯನ್ನ ಮೊಟಕುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮೂಲಕ 12 ದಿನಗಳ ಪಾದಯಾತ್ರೆ 5 ದಿನಕ್ಕೆ ಸಮಾಪ್ತಿಯಾಗಿದೆ.
ಕರೊನಾ ಸೋಂಕು ಕಡಿಮೆಯಾದ ನಂತರ ರಾಮನಗರದಿಂದಲೇ ಪಾದಯಾತ್ರೆ ಶುರುಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ.