Mumbai : ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅಪ್ರಾಪ್ತ ಬಾಲಕರಿಂದ ಅತ್ಯಾಚಾರ…
ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಮೂವರು ಅಪ್ರಾಪ್ತರು ಅತ್ಯಾಚಾರ ನಡೆಸಿ ವಿಡಿಯೋ ಚಿತ್ರೀಕರಿಸಿರುವ ಘಟನೆ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥೆ ಶೌಚಾಲಯ ಬಳಸಲು ಹೋದಾಗ ಆರೋಪಿಗಳು ಬಲವಂತವಾಗಿ ಒಳಗೆ ಕರೆದೊಯ್ದ ಅತ್ಯಾಚಾರ ಎಸೆಗಿದ್ದಾರೆ. ಆರೋಪಿಗಳಲ್ಲಿ ಒಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದರೆ ಮತ್ತೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಆನ್‌ಲೈನ್ ನಲ್ಲಿ ವಿಡಿಯೋ ವೈರಲ್ ಆದ ನಂತರ ಸಂತ್ರಸ್ತೆಯ ಸಹೋದರ ಘಟನೆಯ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ಘಾಟ್‌ಕೋಪರ್ ಪೊಲೀಸರು ಐಪಿಸಿಯ ಸೆಕ್ಷನ್ 376,376 (ಜೆ), 323,500, 34 ಮತ್ತು ಪೋಕ್ಸೋ ಸೆಕ್ಷನ್ 4 ಮತ್ತು ಐಟಿಯ ಸೆಕ್ಷನ್ 66 (ಇ) 67 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪ್ರಾಪ್ತರಾಗಿರುವ ಮೂವರು ಆರೋಪಿಗಳನ್ನು ಡೋಂಗ್ರಿಯಲ್ಲಿರುವ ಚೈಲ್ಡ್ ಕರೆಕ್ಷನ್ ಹೋಮ್ ಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Mentally challenged girl gang-raped, filmed by 3 minors in Mumbai