ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟಿಕೆ Corona
ಬೆಳಗಾವಿ : ಕುಂದನಗರಿಯಲ್ಲಿ ಎಂಇಎಸ್ ಪುಂಡಾಟಿಕೆ ಮುಂದುವರೆದಿದ್ದು, ಕೆಲ ಎಂಇಎಸ್ ಪುಂಡ ಪೋಲಿಗಳು ಬ್ರಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್ ಗಳ ಬಳಿ ಪೋಸ್ ನೀಡಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ಪರಾಜಿತ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ನೇತೃತ್ವದಲ್ಲಿ ಪುಂಡರು ಬಿಮ್ಸ್ ಆಸ್ಪತ್ರೆಗೆ ನುಗ್ಗಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ ನಿರುಪಯುಕ್ತ ಬೆಡ್ ಗಳ ಬಳಿ ನಿಂತು ವೀಡಿಯೋ ಮಾಡಿಕೊಂಡು ಪೋಸ್ ನೀಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪುಂಡರ ವರ್ತನೆ ಬಗ್ಗೆ ಬ್ರಿಮ್ಸ್ ನಿರ್ದೇಶಕರು ಡಿಸಿಗೆ ದೂರು ನೀಡಿದ್ದು, ಯಾವ ರೀತಿ ಕ್ರಮ ಕೈಗೊಳ್ಳಿದ್ದಾರೆ ಕಾದು ನೋಡಬೇಕಿದೆ.