17 ಲಕ್ಷ ವಾಟ್ಸಪ್ ಖಾತೆಗಳನ್ನ ಬ್ಯಾನ್ ಮಾಡಿದ ಕಂಪನಿ…

1 min read

17 ಲಕ್ಷ ವಾಟ್ಸಪ್ ಖಾತೆಗಳನ್ನ ಬ್ಯಾನ್ ಮಾಡಿದ ಕಂಪನಿ…

ಐಟಿ ನಿಯಮಗಳು 2021 ರ ಅನುಸಾರವಾಗಿ ನವೆಂಬರ್‌ನಲ್ಲಿ ಭಾರತದಲ್ಲಿ 17,59,000  ವಾಟ್ಸಪ್ ಖಾತೆಗಳನ್ನ ನಿಷೇಧಿಸಲಾಗಿದೆ ಎಂದು ಮೆಟಾ-ಮಾಲೀಕತ್ವದ WhatsApp ಶನಿವಾರ ಹೇಳಿದೆ.

WhatsApp ದೇಶದಿಂದ ಕಳೆದ ತಿಂಗಳಲ್ಲಿ 602 ಕುಂದುಕೊರತೆ ದೂರುಗಳನ್ನ ಸ್ವೀಕರಿಸಿದೆ ಮತ್ತು ಅವುಗಳಲ್ಲಿ 36 ಮೇಲೆ ಕ್ರಮ ಕೈಗೊಂಡಿದೆ. ಎಂದು ತಿಳಿಸಿದೆ.

ಬ್ಯಾನ್ ಮಾಡಲಾಗಿರುವ  95% ಕ್ಕಿಂತ ಹೆಚ್ಚು ಖಾತೆಗಳು ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುತ್ತಿದ್ದವು, ಅಂತಹ ಖಾತೆಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್ ಹೇಳಿದೆ.

ಮೇ 15 ಮತ್ತು ಜೂನ್ 15 ರ ನಡುವೆ ಭಾರತದಲ್ಲಿ ಕನಿಷ್ಠ 20 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು WhatsApp ಮಾಲೀಕತ್ವದ ಮೆಟಾ ಈ ಹಿಂದೆ ಹೇಳಿತ್ತು. ಕಂಪನಿಯು ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ಗೂಗಲ್ ಸರ್ಚ್ ಇಂಜಿನ್, ನವೆಂಬರ್‌ನಲ್ಲಿ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ 61,000 ಕ್ಕೂ ಹೆಚ್ಚು ವಿಷಯವನ್ನು ತೆಗೆದುಹಾಕಿರುವುದಾಗಿ ಹೇಳಿಕೊಂಡಿದೆ. ಒಟ್ಟು 26,087 ದೂರುಗಳು ಬಂದಿದ್ದು, ಅವುಗಳಲ್ಲಿ ಹೆಚ್ಚಿನವು ಹಕ್ಕುಸ್ವಾಮ್ಯ (ಕಾಪಿ ರೈಟ್ಸ್) ದೂರುಗಳಾಗಿವೆ ಎಂದು ಗೂಗಲ್ ಹೇಳಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd