Metro: ಗಂಟೆಗೆ 350 ಕಿಮೀ ಹೋಗುವ ಮೆಟ್ರೋ ರೈಲು  | ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ

1 min read
Metro Saaksha Tv

ಗಂಟೆಗೆ 350 ಕಿಮೀ ಹೋಗುವ ಮೆಟ್ರೋ ರೈಲು  | ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ

ಗಾಂಧಿನಗರ: ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಓಡುವ ಬುಲೆಟ್ ರೈಲನ್ನು ಪ್ರಾಯೋಗಿವಾಗಿ ಪರೀಕ್ಷಿಸಲು ಗುಜರಾತನ ಸೂರತ್ ನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ

ಗುಜರಾತ್‍ನ ಬಿಲಿಮೋರಾ ಮತ್ತು ಸೂರತ್ ನಡುವೆ ಸಂಚರಿಸುವ ರೈಲು ಇದಾಗಿದ್ದು, ಗಂಟೆಗೆ 350 ಕಿಮೀ ವೇಗದಲ್ಲಿ ಹೋಗುತ್ತದೆ. 2026ರಲ್ಲಿ ಇದರ ಮೊದಲಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೊದಲು ಬಿಲಿಮೋರಾ ಮತ್ತು ಸೂರತ್ ನಡುವೆ ಪ್ರಾಯೋಗಿಕ ಪರೀಕ್ಷೆ ನಂತರ ಇತರ ಭಾಗಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ರೈಲು ವಿಮಾನಗಳ ಟೇಕ್ ಆಫ್ ವೇಗಕ್ಕೆ ಸಮನಾಗಿರುತ್ತದೆ ಎಂದು ವರದಿಯಾಗಿದೆ.

Metro tarck Saaksha Tv

ಇದು ಪ್ರಯಾಣಿಕರಿಗೆ ಗೇಮ್ ಚೇಂಜರ್ ಆಗಿರುತ್ತದೆ ಮತ್ತು ವಿಮಾನ ಪ್ರಯಾಣಕ್ಕೆ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ಬುಲೆಟ್ ರೈಲುಗಳು ಕಡಿಮೆ ಚೆಕ್ ಇನ್ ಸಮಯದಲ್ಲಿ ಹೆಚ್ಚು ಸ್ಥಳಗಳ ಸಂಪರ್ಕ ಸಾಧಿಸಲು ಪ್ಲಾನ್ ರೂಪಿಸಲಾಗಿದೆ. ಪ್ರಸ್ತುತ ಗಂಟೆಗೆ 350 ಕಿಮೀ ವೇಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದರೂ ಈ ವೇಗದಲ್ಲಿ ರೈಲುಗಳು ಸಂಚರಿಸುವುದಿಲ್ಲ.

ಕಾರ್ಯಾಚರಣೆಯ ವೇಗ ಗಂಟೆಗೆ 320 ಕಿಮೀ ಆಗಿರುತ್ತದೆ. ಬುಲೆಟ್ ರೈಲು ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್ ಎಂಬ ವಿಶೇಷ ಟ್ರ್ಯಾಕ್‍ಗಳಲ್ಲಿ ಚಲಿಸುತ್ತವೆ. ಜಪಾನ್ ತಂತ್ರಜ್ಞಾನದ ನೆರವಿನಿಂದ ಇದನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd