ದೆಹಲಿ: ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಜಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಟನೆಯು ದೆಹಲಿ ಮೆಟ್ರೋದ ಜೋರ್ ಬಾಘ್ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.. ಇನ್ನೂ ಈ ಘಟನೆಯಿಂದಾಗಿ ರೈಲು ಸಂಚಾರಕ್ಕೆ ಸುಮಾರು ಕಾಲ ಅಡಚಣೆಯುಂಟಾಗಿದೆ..
ಪ್ರಕರಣ ಕುರಿತು ಬೆಳಗ್ಗೆ 11.23ಕ್ಕೆ ಟ್ವೀಟ್ ಮಾಡಿದ್ದ ದೆಹಲಿ ಮೆಟ್ರೊ ರೈಲು ನಿಗಮವು ಬಾಘ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ರೈಲು ಹಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಹಳದಿ ಮಾರ್ಗದಲ್ಲಿನ ಸಂಚಾರ ವ್ಯತ್ಯಯವಾಗಲಿದೆ. ಉಳಿದ ಮಾರ್ಗಗಳ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿತ್ತು.
ರೈಲು, ಹುಡಾ ಸಿಟಿ ಕಡೆಗೆ ಚಲಿಸುತ್ತಿದ್ದಾಗ ಮಹಿಳೆ ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಜಿಗಿದಿದ್ದಾರೆ. ಈ ವೇಳೆ ರೈಲು ಮಹಿಳೆಗೆ ಡಿಕ್ಕಿಯಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಸಫ್ದಾರ್ ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.. ಮಹಿಳೆಗೆ ಸುಮಾರು 50 ವರ್ಷ ವಯಸ್ಸಾಗಿದ್ದು ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ..