ಮೆಕ್ಸಿಕನ್ ಬ್ಲಾಕ್ ಕಾಫಿ ಮಾಡುವ ವಿಧಾನ ಗೊತ್ತಾ… ??
ಕೆಲಸದ ಒತ್ತಡದಲ್ಲಿದ್ದಾಗ ಕಾಫಿ ಹೀರುವ ಅನುಭವವೇ ಚೆಂದ, ಒತ್ತಡದಿಂದ ವಿಮುಕ್ತಿಗೊಳಿಸಿ ಮೆದುಳನ್ನ ರಿಲ್ಯಾಕ್ಸ್ಗೊಳಿಸುತ್ತದೆ. ಇಂಥಹ ಕಾಫಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ಬ್ಲಾಕ್ ಕಾಫಿಯು ಒಂದು. ಇದೀಗ ಮೆಕ್ಸಿಕನ್ ಬ್ಲಾಕ್ ಕಾಫಿ ಮಾಡುವ ವಿಧಾನದ ಬಗ್ಗೆ ತಿಳಿಯೋಣ
ಈ ಸಾಂಪ್ರದಾಯಿಕ ಬ್ಲಾಕ್ ಕಾಫಿಯು ಸ್ವೀಟ್ ಚಾಕೊಲೇಟ್, ಮಸಾಲೆಯುಕ್ತ ದಾಲ್ಚಿನ್ನಿ ಮತ್ತು ಸ್ಟ್ರಾಂಗ್ ಕಾಫಿ ಮಿಶ್ರಣವನ್ನ ಬಯಸುತ್ತೆ. ಕೊನೆಯಲ್ಲಿ ಕೆನೆ ಕಾಫಿಯನ್ನ ಮೃದುಗೊಳಿಸುತ್ತದೆ.
ಮೆಕ್ಸಿಕನ್ ಬ್ಲಾಕ್ ಕಾಫಿ ಮಾಡಲು ಬೇಕಾಗುವ ಪದಾರ್ಥಗಳು
150 ml ಸ್ಟ್ರಾಂಗ್ ಫ್ರೆಂಚ್ ಪ್ರೆಸ್ ಕಾಫಿ
15 ml ಡಾರ್ಕ್ ಚಾಕೊಲೇಟ್ ಸಾಸ್
ದಾಲ್ಚಿನ್ನಿ ಪೌಡರ್
ಹಾಲಿನ ಕೆನೆ
ಚಿಟಿಕೆ ಜಾಯಿಕಾಯಿ
ದಾಲ್ಚಿನ್ನಿ ಪೀಸ್, ಅಲಂಕರಿಸಲು
ಮೆಕ್ಸಿಕ್ ಬ್ಲಾಕ್ ಕಾಫಿ ಮಾಡುವ ವಿಧಾನ…
ಮೊದಲು ಒಂದುಮಗ್ ಗೆ ಸ್ಟ್ರಾಂಗ್ ಕಾಫಿಯನ್ನ ರೆಡಿಮಾಡಿಕೊಳ್ಳಿ.
ಈಗ ಚಾಕೊಲೇಟ್ ಸಾಸ್ ಮತ್ತು ದಾಲ್ಚಿನ್ನಿ ಪೌಡರ್ ಅನ್ನ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಹಾಲಿನ ಕೆನೆಯೊಂದಿಗೆ, ಜಾಯಿಕಾಯಿ ಪುಡಿ ಸಿಂಪಡಿಸಿ ಮತ್ತು ದಾಲ್ಚಿನ್ನಿ ಪೀಸ್ ನಿಂದ ಅಲಂಕರಿಸಿ.
ಬ್ಲಾಕ್ ಕಾಫಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳು
1: ತೂಕ ಇಳಿಸಲು
ಬ್ಲಾಕ್ ಕಾಫಿ ಆರೋಗ್ಯಕರವಾಗಿ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬ್ಲಾಕ್ ಕಾಫಿ ಕ್ಯಾಲೋರಿ ಮುಕ್ತಪಾನೀಯವಾಗಿದೆ. ಇದರಲ್ಲಿ ಕೆಫೀನ್ ಸಮೃದ್ಧವಾಗಿದ್ದು, ಚಯಾಪಚಯವನ್ನು ಉತ್ತೇಜಿಸುತ್ತದೆ ಮತ್ತು ಹಸಿವನ್ನು ನಿಗ್ರಹಿಸುತ್ತದೆ.
ಬ್ಲಾಕ್ ಕಾಫಿ ಕ್ಲೋರೊಜೆನಿಕ್ ಆಮ್ಲವನ್ನ ಹೊಂದಿದ್ದು ಅದು ಗ್ಲೂಕೋಸ್ ಉತ್ಪಾದನೆಯನ್ನ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಊಟದ ನಂತರ ಕಪ್ಪು ಕಾಫಿಯನ್ನು ಸೇವಿಸಿದರೆ, ಅದು ಗ್ಲೂಕೋಸ್ ರಚನೆಯನ್ನ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ತೂಕ ನಿರ್ವಹಣೆಯನ್ನು ನಿಭಾಯಿಸುತ್ತದೆ.
2: ದೈಹಿಕ ಕಾರ್ಯಕ್ಷಮತೆಯನ್ನ ಸುಧಾರಿಸುತ್ತದೆ.
ಕೆಫೀನ್ ನಮ್ಮ ನರಮಂಡಲವನ್ನ ಉತ್ತೇಜಿಸುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಈ ಪ್ರಚೋದನೆ ರಕ್ತದಲ್ಲಿ ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ದೇಹವನ್ನ ತೀವ್ರವಾದ ದೈಹಿಕ ಪರಿಶ್ರಮಕ್ಕೆ ಸಿದ್ಧಪಡಿಸುತ್ತದೆ.
3: ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು:
ಬ್ಲಾಕ್ ಕಾಫಿ ಕುಡಿಯುವುದರಿಂದ ಮಧುಮೇಹದ ಅಪಾಯದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಕಾಫಿ ಸಹಾಯ ಮಾಡುತ್ತದೆ ಅದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.
Mexican block coffee: Do you know how to make Mexican block coffee?? Read on….