Mexican mayor | ಮೊಸಳೆಯನ್ನೇ ಮದ್ವೆಯಾದ ಮೇಯರ್!
ಮೆಕ್ಸಿಕೋದಲ್ಲಿ ಹಳೆಯ ಆಚರಣೆಯಂತೆ ಮದುವೆ
ಮಳೆಯಾಗಲೆಂದು ಮೊಸಳೆಯನ್ನ ವರಸಿದ ಮೇಯರ್
ಮೊಸಳೆಯ ಮೂತಿಗೆ ಮುತ್ತಿಟ್ಟು ಮೇಯರ್ ಮದುವೆ
ವಾದ್ಯ ಓಲಗಗಳೊಂದಿಗೆ ಮೇಯರ್ – ಮೊಸಳೆ ಮಧ್ವೆ
ನದಿಯಲ್ಲಿ ಮೀನು ಹಿಡಿಯಲು ಅನುಕೂಲವಾಗುವಂತೆ ಸಾಕಷ್ಟು ಮಳೆಯಾಗಲಿ ಎಂದು ಮೆಕ್ಸಿಕೋದ ಮೇಯರ್ ಮೊಸಳೆಯನ್ನು ಮದುವೆಯಾಗಿದ್ದಾರೆ.
ಸ್ಯಾನ್ ಪೆಡ್ರೊ ಹ್ವಾಮೆಲುಲಾ ನಗರದ ಮೇಯರ್ ವಿಕ್ವರ್ ಹ್ಯೂಗೋ ಸೊಸಾ ಪಟ್ಟ ಮೊಸಳೆಯ ಮೂತಿಗೆ ಮುತ್ತಿಟ್ಟು, ಸಾಂಕೇತಿಕವಾಗಿ ವಿವಾಹವಾಗಿದ್ದಾರೆ.

ಮೊಸಳೆ ಕಚ್ಚದಂತೆ ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟಲಾಗಿತ್ತು.
ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ.
ಮೇಯರ್ ಮತ್ತು ಮೊಸಳೆ ಮದುವೆ ಅದ್ಧೂರಿಯಾಗಿ ನೆರವೇರಿದ್ದು, ಸಂಪ್ರದಾಯಬದ್ಧವಾಗಿ ಮದುವೆ ಸಮಾರಂಭ ನಡೆದಿದೆ.
ಬಳಿಕ ಜನರು ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.