MGNREGS : ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ…
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ನರೇಗಾ ಕೂಲಿಕಾರರಿಗೆ ಕೆಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯದಲ್ಲಿ ಕಾರ್ಮಿಕರಿಗೆ ನೀಡಲಾಗುವ ನರೇಗಾ ಕೂಲಿ ದರವನ್ನ ದಿನಕ್ಕೆ 7 ರೂಪಾಯಿಯಂತೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ನರೇಗಾ ಯೋಜನೆಯಲ್ಲಿ ((MGNREGS) ದಿನಕ್ಕೆ 309 ರೂ ಕೊಡಲಾಗುತ್ತಿತ್ತು. ಇದೀಗ ದರವನ್ನ 316 ರೂಗಳಿಗೆ ಹೆಚ್ಚಿಸಲಾಗಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಇದೀಗ ಶಾಲೆ ಮತ್ತು ಆಸ್ಪತ್ರೆಗಳನ್ನ ಸಹ ನರೇಗಾ ಯೋಜನೆಯಡಿ ತರಲು ಸರ್ಕಾರ ಮುಂದಾಗಿದೆ.
ರಾಜ್ಯದಿಂದ ರಾಜ್ಯಕ್ಕೆ ನರೇಗಾ ಕೂಲಿ ದರ ವ್ಯತ್ಯಾಸವಿರಲಿದೆ. ಹರಿಯಾಣದಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಅತಿ ಹೆಚ್ಚು ರೂ.357 ನೀಡಿದರೆ, ಕೇರಳದಲ್ಲಿ ರೂ.333, ಗೋವಾದಲ್ಲಿ ರೂ.322, ಲಕ್ಷದ್ವೀಪದಲ್ಲಿ ರೂ.304, ಮತ್ತು ಪಂಜಾಬ್ 303 ರೂ. ನೀಡಲಾಗ್ತಿದೆ ಎಂದು ವರದಿಯಾಗಿದೆ.
MGNREGS : Good news for NREGA wage labourers; Govt hiked daily wages….