MI vs DC Match | ಮುಂಬೈ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಕಳೆದ ಎರಡು ಮೂರು ವರ್ಷಗಳಿಂದ ಐಪಿಎಲ್ ಟೂರ್ನಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಮೋಘ ಪ್ರದರ್ಶನ ನೀಡಿತ್ತು. ಆದ್ರೆ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ.
ಒಂದು ಪಂದ್ಯದಲ್ಲಿ ಗೆದ್ದರೇ ಮತ್ತೊಂದು ಪಂದ್ಯದಲ್ಲಿ ಸೋಲೋದು ಡೆಲ್ಲಿ ತಂಡಕ್ಕೆ ರೂಢಿಯಾಗಿತ್ತು.
ಆದ್ರೆ ಕಳೆದ ಎರಡು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡಿದ್ದು, ಈಗ ಫ್ಲೇ ಆಫ್ ಗೆ ಎಂಟ್ರಿಯಾಗುವ ಆಸೆಯನ್ನು ಮಾತ್ರ ಕೈಬಿಟ್ಟಿಲ್ಲ.
ಆಡಿರುವ 13 ಪಂದ್ಯಗಳಲ್ಲಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಇದೀಗ 14 ನೇ ಪಂದ್ಯವನ್ನಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇ ಆಫ್ ಎಂಟ್ರಿಯಾಗುವ ಸಾಧ್ಯತೆಗಳು ಇವೆ.
ಇಂದು ನಡೆಯಲಿರುವ ಟೂರ್ನಿಯ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೇಡೆ ಅಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಇನ್ನು ಮುಂಬೈ ಇಂಡಿಯನ್ಸ್ ಗೆ ಈ ಪಂದ್ಯ ಮಾನ ಉಳಿಸಿಕೊಳ್ಳುವ ಪಂದ್ಯವಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಪಂದ್ಯದಲ್ಲಿ ಗೆದ್ದು ಗೆಲುವಿನೊಂದಿಗೆ ಟೂರ್ನಿ ಮುಗಿಸಲು ಪ್ಲಾನ್ ಮಾಡಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಖ್ಯವಾಗಿ ಆರಂಭಿಕ ಸಮಸ್ಯೆ ಕಾಡುತ್ತಿತ್ತು. ಡೇವಿಡ್ ವಾರ್ನರ್ ಅತ್ಯುತ್ತಮ ಲಯದಲ್ಲಿದ್ದಾರೆ. ತಂಡದ ರನ್ ಮೆಷಿನ್ ಆಗಿ ಗೆಲುವಿನ ರೂವಾರಿ ಕೂಡ ಆಗುತ್ತಿದ್ದಾರೆ.
ಆದ್ರೆ ಪೃಥ್ವಿ ಶಾ ಅವರ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿತ್ತು. ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಆರಂಭಿಕರ ಸಮಸ್ಯೆ ಬಗೆಹರಿದಿದೆ. ಸರ್ಫರಾಜ್ ಖಾನ್ ಆರಂಭಿಕರಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ.
ಇನ್ನುಳಿದಂತೆ ಮಿಟ್ಚೆಲ್ ಮಾರ್ಶ್ ಮತ್ತೆ ಫಾರ್ಮ್ ಕಂಡುಕೊಂಡಿದ್ದಾರೆ. ರಿಷಬ್ ಪಂತ್ ಇನ್ನಷ್ಟು ಜವಾಬ್ದಾರಿಯುತವಾಗಿ ಆಡಬೇಕಿದೆ. ಲಲಿತ್ ಯಾದವ್ ಕೂಡ ತಂಡಕ್ಕೆ ಆಧಾರವಾಗಬೇಕಿದೆ. ಹಾಗೇ ರೊವ್ಮನ್ ಪೊವೆಲ್ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ಇನ್ನು ಬೌಲಿಂಗ್ ನಲ್ಲಿ ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್ ಟ್ರಂಪ್ ಕಾರ್ಡ್ ಬೌಲರ್ ಗಳಾಗಿದ್ದಾರೆ. ಇನ್ನುಳಿದಂತೆ ಆನ್ರಿಚ್ ನೊಕಿಯಾ, ಚೇತನ್ ಸಕಾರಿಯಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಅಸ್ತ್ರಗಳು. ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಮ್ಯಾಜಿಕ್ ಡೆಲ್ಲಿ ತಂಡಕ್ಕೆ ಅಗತ್ಯವಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೇವಿಡ್ ವಾರ್ನರ್
ಸರ್ಫರಾಜ್ ಖಾನ್
ರಿಷಬ್ ಪಂತ್
ಮಿಟ್ಚೆಲ್ ಮಾರ್ಶ್
ಲಲಿತ್ ಯಾದವ್
ರೊವ್ಮನ್ ಪೊವೆಲ್
ಅಕ್ಷರ್ ಪಟೇಲ್
ಶಾರ್ದೂಲ್ ಥಾಕೂರ್
ಕುಲದೀಪ್ ಯಾದವ್
ಚೇತನ್ ಸಕಾರಿಯಾ
ಆನ್ರಿಚ್ ನೊಕಿಯಾ mi-vs-dc-match-Delhi Capitals Probable XIs