ಬೆಂಗಳೂರು, ಮೇ 14 : ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮೈಕಲ್ ಮಧು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೈಕಲ್ ಮಧು (50) ಅವರು ಬುಧವಾರ ಮಧ್ಯಾಹ್ನ ಊಟ ಮಾಡಿದ ಬಳಿಕ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು ತಕ್ಷಣ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಕಲ್ ಮಧು ಶಿವರಾಜ್ ಕುಮಾರ್ ನಟನೆಯ ಓಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಶ್, ಎಕೆ 47, ಭಜರಂಗಿ, ಅಧ್ವಮೇಧ, ಸುಪ್ರಭಾತ, ಮಿನುಗುತಾರೆ, ಪಾಪಿಗಳ ಲೋಕದಲ್ಲಿ, ಸೂರ್ಯವಂಶ, ನೀಲಾಂಬರಿ, ಯಮಲೋಕದಲ್ಲಿ ವೀರಪ್ಪನ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೈಕಲ್ ಮಧು ನಟಿಸಿದ್ದರು.
ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ
ಚುನಾವಣೋತ್ತರ ಸಮೀಕ್ಷೆಗಳು ಕೇವಲ ಅಂಕಿಅಂಶಗಳ ಆಟವಾಗಿದ್ದು ಅವುಗಳ ಮೇಲೆ ನನಗೆ ಕಿಂಚಿತ್ತೂ ನಂಬಿಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ....








