Michiyo Tsujimura: ಗ್ರೀನ್ ಟೀ ಮಹತ್ವದವನ್ನು ಜಗತ್ತಿಗೆ ಹೇಳಿದ ಮಹಿಳೆ.. ಯಾವಾಗ ಗ್ರೀನ್ ಟೀ ಕುಡಿಯಬಾರದು ಗೊತ್ತಾ..?
ಗ್ರೀನ್ ಟೀ .. ಕೊರೊನಾಗೂ ಮುನ್ನ ಕೆಲವರಿಗೆ.. ಕೊರೊನಾ ನಂತರ ಹಲವರಿಗೆ ಇದು ಜೀವನದ ಒಂದು ಭಾಗವಾಗಿದೆ. ಆರೋಗ್ಯವಂತರು ಮತ್ತು ದಪ್ಪ ಇರುವವರು ತೂಕ ಇಳಿಸಿಕೊಳ್ಳಲು ಗ್ರೀನ್ ಟೀಯನ್ನು ಹೆಚ್ಚಾಗಿ ಕುಡಿಯುತ್ತಿದ್ದಾರೆ.
ಹಾಗಾದ್ರೆ ಗ್ರೀನ್ ಟೀ ಹುಟ್ಟಿದ್ದೇಗೆ..? ಅದರ ವಿಶೇಷತೆಯನ್ನು ಪ್ರಪಂಚಕ್ಕೆ ಸಾರಿದವರು ಯಾರು..? ಅಂದ್ರೆ ಅವರ ಹೆಸರು ಮಿಚಿಯೋ ಸುಜಿಮುರಾ.!!
ಮಿಚಿಯೋ ಸುಜಿಮುರಾ.. ಜಪಾನೀಸ್ ಶಿಕ್ಷಣ ತಜ್ಞೆ, ಜೀವರಸಾಯನಶಾಸ್ತ್ರಜ್ಞೆ. ಇವರು ತಮ್ಮ ಸಂಶೋಧನೆಯ ಮೂಲಕ ಗ್ರೀನ್ ಟೀಯಲ್ಲಿನ ಅಂಶಗಳನ್ನು ಜಗತ್ತಿಗೆ ತಿಳಿಸಿದರು. ಇಂದು ಅವರ 133 ನೇ ಹುಟ್ಟುಹಬ್ಬ. ಅದಕ್ಕಾಗಿಯೇ ಗೂಗಲ್ ಅವರಿಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಮಿಚಿಯೋ ಸುಜಿಮುರಾ ಜಪಾನ್‍ನಲ್ಲಿ ಕೃಷಿಯಲ್ಲಿ ಪದವಿ ಪಡೆದ ಮೊದಲ ಮಹಿಳೆ.
ಸುಜಿಮುರಾ ಸೆಪ್ಟೆಂಬರ್ 17, 1888 ರಂದು ಸೈತಮಾ ಪ್ರದೇಶದ ಒಕಗಾವಾದಲ್ಲಿ ಜನಿಸಿದರು.
ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ,ಸುಜಿಮುರಾ ಟೋಕಿಯೊದ ಇಂಪೀರಿಯಲ್ ವಿಶ್ವವಿದ್ಯಾನಿಲಯದಲ್ಲಿ ಮೈಕೊ ಜೀವರಸಾಯನಶಾಸ್ತ್ರದಲ್ಲಿ ಸಂಶೋಧನೆ ಮಾಡಿದರು.
ಗ್ರೀನ್ ಟೀನಲ್ಲಿ ವಿಟಮಿನ್ ಬಿ 1 ಇದೆ ಎಂದು ಅವರು ಕಂಡುಕೊಂಡರು.
ಸುಜಿಮುರಾ ಸೂಕ್ಷ್ಮದರ್ಶಕ ಸಂಶೋಧನೆ ಗ್ರೀನ್ ಟೀಯಲ್ಲಿ ವಿಟಮಿನ್ ಸಿ ಇರುವುದನ್ನು ಕಂಡುಹಿಡಿಯುತ್ತಾರೆ.
1929 ರಲ್ಲಿ ಗ್ರೀನ್ ಟೀನಲ್ಲಿ ಟ್ಯಾನಿನ್‍ಗ ಳು ಮತ್ತು ಫ್ಲೇವನಾಯ್ಡ್ ಕ್ಯಾಟೆಚಿನ್ ಇರುವುದನ್ನು ಗುರ್ತಿಸುತ್ತಾರೆ.
ಈ ಎಲ್ಲ ಸಂಶೋಧನೆಗಳನ್ನು ಸಂಯೋಜಿಸಿ ಅವರು ‘ ಅನ್ ದಿ ಕೆಮಿಕಲ್ ಕಂಪೋನೆನೆಟ್ಸ್ ಆಫ್ ಗ್ರೀನ್ ಟೀ’ ಎಂಬ ಪ್ರಬಂಧವನ್ನು ಬರೆದರು.
1932 ರಲ್ಲಿ, ಮಿಚಿಯೊ ಸುಜಿಮುರಾ ಕೃಷಿಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಜಪಾನಿನ ಮಹಿಳೆಯಾದರು.
ಮಿಚಿಯೋ ಜೂನ್ 1, 1969 ರಂದು 81 ನೇ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆಗಳಿಂದ ನಿಧನರಾದರು.
ಗ್ರೀನ್ ಟೀ ಬಗ್ಗೆ ನಿಮಗಿದು ತಿಳಿದಿರಲಿ
* ಖಾಲಿ ಹೊಟ್ಟೆಯಲ್ಲಿ ತುಂಬಾ ಗ್ರೀನ್ ಟೀ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಮತ್ತು ಲಿವರ್ ಸಮಸ್ಯೆ ಉಂಟಾಗಬಹುದು
* ವಾರಕ್ಕೆ ಮೂರು ಬಾರಿ ಗ್ರೀನ್ ಟೀ ಕುಡಿಯುವುದರಿಂದ ವ್ಯಕ್ತಿಯ ಜೀವಿತಾವಧಿ ಹೆಚ್ಚಾಗಬಹುದು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.
* ಹಸಿರು ಚಹಾದಲ್ಲಿರುವ ಎಪಿಗಲ್ಲೊಕಟೆಚಿನ್ -3 ಗ್ಯಾಲೇಟ್ (ಇಜಿಸಿಜಿ) ಅನ್ನೋ ಪೋಷಕಾರಂಶ ಮೊಡವೆಗಳ ಬೆಳವಣಿಗೆಗೆ ಕಾರಣವಾಗುವ ಪ್ರದೇಶದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕಡಿಮೆಗೊಳಿಸುತ್ತದೆ.
* ಗರ್ಭಿಣಿಯರು ಎರಡು ಕಪ್ ಗಿಂತ ಹೆಚ್ಚು ಗ್ರೀನ್ ಟೀ ಸೇವಿಸಿದರೆ, ಗರ್ಭಪಾತವಾಗುವ ಅಪಾಯವಿದೆ ಎಂದು ಜಪಾನಿನ ಸಂಶೋಧಕರು ಹೇಳುತ್ತಾರೆ.
* ಗ್ರೀನ್ ಟೀನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯವನ್ನು ಸದೃ sವಾಗಿಡಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.
ಈ ಸಮಯದಲ್ಲಿ ಗ್ರೀಸ್ ಟೀ ಕುಡಿಯಬಾರದು
*ರಾತ್ರಿ ಮಲಗುವ ಮುನ್ನ
*ಗ್ರೀನ್ ಟೀ ದೊಂದಿಗೆ ಔಷಧಿಗಳನ್ನು ತೆಗೆದುಕೊಳ್ಳಬಾರದು
*ಮಧ್ಯಾಹ್ನ ಊಟದ ನಂತರ ಗ್ರೀನ್ ಟೀ ಸೇವಿಸುವುದರಿಂದ ಅಪೌಷ್ಟಿಕತೆಗೆ ಕಾರಣವಾಗಬಹುದು