Mid -day meals: ಬಿಸಿ ಊಟದ ಕುರಿತು ಶಿಕ್ಷಣ ಇಲಾಖೆಯಿಂದ ಹೊಸ ಸೂಚನೆ…
ಶಾಲೆಗಳಲ್ಲಿ ಯಾವ ಮಕ್ಕಳೂ ಹಸಿವಿನಿಂದ ಬಳಲವಬಾರದು ಎಂದು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯುಟ ಯೋಜನೆಯನ್ನ ಜಾರಿ ಮಾಡಿರುವುದು ಗೊತ್ತೇ ಇದೆ. ಇದೀಗ ಹೊಸ ವಿಷಯವೆಂದರೆ ಶಾಲೆಗಳಲ್ಲಿಮಧ್ಯಹ್ನಾದ ಬಿಸಿಯೂಟದ ಸಮಯವನ್ನ ಬದಲಾವಣೆ ಬದಲಾವಣೆ ಮಾಡುವ ಕುರಿತು ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ.
ಈ ಸೂಚನೆಯ ಪ್ರಕಾರ ಮಕ್ಕಳಿಗೆ ಮಧ್ಯಾಹ್ನದ ಬಿಸ ಊಟದ ಸಮಯ ನಿತ್ಯದ ಸಮಯಕ್ಕಿದಂತ ಒಂದು ಗಂಟೆ ತಡವಾಗಿ ಶುರಯವಾಗಲಿದೆ, ಏಕೆಂದರೇ…
ಕಿರಿಯ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಒಟ್ಟಿಗೆ ಊಟಕ್ಕೆ ಬರುವುದರಿಂದ ನೂಕು ನುಗ್ಗಲಾಗುವುದು ಮತ್ತು ಗಲಾಟೆ ಆಗುತ್ತಿದೆ. ಇದಲ್ಲದೇ ಶಾಲಾ ಮಕ್ಕಳು ತಮ್ಮ ತಟ್ಟೆಗಳನ್ನ ತೊಳೆಯುವ ಸಂದರ್ಭದಲ್ಲೂ ಇದೆ ರೀತಿ ಉಂಟಾಗುತ್ತಿದೆ.
ಇದೇ ಕಾರಣಕ್ಕೆ ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 1.45 ರವರೆಗೆ, ಆರರಿಂದ ಹತ್ತನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2 ರಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಿಸಲು ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಮಕ್ಕಳ ಸಂಖ್ಯೆ ಅಧಿಕವಿರುವ ಶಾಲೆಗಳಲ್ಲಿ ಮತ್ತು ಒಂದೇ ಅಡುಗೆ ಮನೆ ಇರುವ ಕರ್ನಾಟಕ ಪಬ್ಲಿಕ್ ಶಾಲೆ ಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯವನ್ನು ಬದಲಿಸುವಂತೆ ಸೂಚಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಈಗಾಗಲೇ ಸೂಚನೆ ಹೊರಡಿಸಿದೆ.
Mid -day meals : New instruction from education department on Mid -day meals …








