ಬೆಂಗಳೂರು: ಮಾಲ್ಡೀವ್ಸ್ ಅಧ್ಯಕ್ಷ ಮತ್ತೆ ಭಾರತೀಯ ವಿರೋಧಿ ನಿರ್ಧಾರಗಳಿಗೆ ಸುದ್ದಿಯಾಗುತ್ತಿದ್ದಾರೆ.
ಮಾಲ್ಡೀವ್ಸ್ ನಲ್ಲಿರುವ ಸೇನಾ ಸಿಬ್ಬಂದಿಗಳ ಮೊದಲ ತಂಡವನ್ನು ಮಾ.10 ರೊಳಗೆ ಮರಳಿ ಕಳುಹಿಸಲಾಗುವುದು. ಇನ್ನುಳಿದ ಸಿಬ್ಬಂದಿಗಳನ್ನು ಮೇ. 10ರೊಳಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಚೀನಾ ಪರ ನಿಲುವು ಹೊಂದಿದ್ದು, ಸಂಸತ್ ನಲ್ಲಿ ಈ ಕುರಿತು ಮಾಹಿತಿ ಪ್ರಕಟಿಸಿದ್ದಾರೆ. ವಿದೇಶಿ ಸೇನಾ ಪಡೆಯ ಇರುವಿಕೆಯನ್ನು ತೆರವುಗೊಳಿಸುವುದು ಹಾಗೂ ತಮ್ಮ ದೇಶ ಕಳೆದುಕೊಂಡಿರುವ ಸಾಗರ ಪ್ರದೇಶವನ್ನು ಹಿಂಪಡೆಯುವ ನಿರೀಕ್ಷೆಯೊಂದಿಗೆ ಜನರು ತಮ್ಮ ಆಡಳಿತವನ್ನು ಬೆಂಬಲಿಸಲಿದ್ದಾರೆ ಎಂದು ಮುಯಿಝು ಸಂಸತ್ ನಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ನವೆಂಬರ್ 17 ರಂದು ಮಾಲ್ಡೀವ್ಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಮುಯಿಝು ಮಾರ್ಚ್ 15 ರೊಳಗೆ ತನ್ನ ದೇಶದಿಂದ 88 ಮಿಲಿಟರಿ ಸಿಬ್ಬಂದಿ ಹಿಂಪಡೆಯುವಂತೆ ಭಾರತಕ್ಕೆ ಹೇಳಿದ್ದರು.