ಮಡಿಕೇರಿ: ಪ್ರತಿ ದಿನ ವಾಕಿಂಗ್ ನೆಪದಲ್ಲಿ ಬರುವ ಮಹಿಳೆಯೊಬ್ಬಳು ಡೈರಿ ಮುಂದಿದ್ದ ಹಾಲಿನ ಪ್ಯಾಕೆಟ್ ಕದಿಯುತ್ತಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದಿರುವುದು ಕೊಡಗು ಜಿಲ್ಲೆ ಕುಶಾಲನಗರದ ಮಹಿಳಾ ಸಮಾಜ ಕಟ್ಟಡದ ಗ್ರೇಸ್ ದಿನಸಿ ಅಂಗಡಿ ಮುಂದೆ. ಹಾಲಿನ ಡೈರಿಗಳಿಂದ ಲಾರಿಗಳಲ್ಲಿ ವಿತರಕರಿಗೆ ಸರಬರಾಜು ಮಾಡುವವರು ಅಂಗಡಿ ಮುಂದೆ ಹಾಲಿನ ಕ್ರೇಟ್‍ಗಳನ್ನು ಇಳಿಸಿ ಮುಂದಿನ ವಿತಕರಿಗೆ ನೀಡಲು ತೆರಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆಯೊಬ್ಬಳು ಹಾಲಿನ ಪ್ಯಾಕೇಟ್ ಕದಿಯುವ ಪ್ರಯತ್ನಕ್ಕೆ ಮಂದಾಗುತ್ತಾಳೆ.

ಈ ಸಂದರ್ಭದಲ್ಲಿ ಎದುರಿಗೆ ಒಂದು ವಾಹನ ಬರುವುದನ್ನು ಗಮನಿಸಿ ಸ್ಥಳದಿಂದ ಕಾಲ್ಕೀಳುತ್ತಾಳೆ. ವಾಹನ ತೆರಳಿದ ಬಳಿಕ ಮತ್ತೆ ಯಾರೂ ಇಲ್ಲದನ್ನು ಗಮನಿಸಿ ತನಗೆ ಬೇಕಾದ ಅರ್ಧ ಲೀಟರಿನ ಪ್ಯಾಕೇಟ್ ಗಳನ್ನು ಹುಡುಕಿ ಎರಡುವರೇ ಲೀಟರ್ ನಷ್ಟು ಹಾಲನ್ನು ಕದ್ದು ಎಸ್ಕೇಪ್ ಆಗುತ್ತಾಳೆ.

ನಿತ್ಯ ಕೂಡಿಗೆ ಹಾಲಿನ ಡೈರಿಯಿಂದ ಪಟ್ಟಣಕ್ಕೆ ಹಾಲು ಸರಬರಾಜಾಗುತ್ತದೆ. ಅಂಗಡಿ ಮಾಲೀಕರು ಹಾಲಿನ ಪ್ರಮಾಣ ಕಡಿಮೆ ಇರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








