ಮೇ 1 ರಿಂದ ಹಾಲಿನ ದರ ಏರಿಕೆ ಸಾಧ್ಯತೆ – ಸಿ ಎಂ ಗೆ ಕೆಎಂಎಫ್ ಮನವಿ
ಏರುತ್ತಿರುವ ಹಣದದುಬ್ಬರ ಪೆಟ್ರೋಲ್ , ಡಿಸೇಲ್, ಕರೆಂಟ್ ಬಿಲ್ ಅಡುಗೆ ಎಣ್ಣೆ ಉಫ್ ಇಷ್ಟೆಲ್ಲ ದರ ಏರಿಕೆಯ ನಡುವೆ ಕೆ ಎಂ ಎಫ್ ಕೂಡ ದರ ಏರಿಕೆಯ ಬರೆ ಎಳೆಯಲು ಸಿದ್ದವಾಗತ್ತಿದೆ. KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ KMF ಹಾಲಿನ ಬೆಲೆ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿದ್ದಾರೆ. ಮೇ 1 ರಿಂದ ಪರಿಷ್ಕೃತ ದರ ಜಾರಿ ಬರುವ ಸಾಧ್ಯತೆ ಹೆಚ್ಚಿದೆ.
ಬಾಲಚಂದ್ರ ಜಾರಕಿಹೊಳಿ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ ಇನ್ನು ಎರಡು ದಿನಗಳಲ್ಲಿ ಹಾಲಿನ ದರ ಏರಿಕೆ ಅಥವಾ ಯಥಾಸ್ಥಿತಿ ಕುರಿತು ಅಧಿಕೃತ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ. 2 ತಿಂಗಳ ಹಿಂದೆಯೂ ಹಾಲಿನದರ ಏರಿಕೆಗಾಗಿ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದ್ರು. ಆದ್ರೆ ಸಿಎಂ ಬೊಮ್ಮಾಯಿ ಬೆಲೆ ಏರಿಕೆ ಪ್ರಸ್ತಾವವನ್ನು ಮುಂದೂಡಿದ್ರು. ಇದೀಗ ಎಲ್ಲಾ ಬೆಲೆಗಳು ಏರಿಕೆಯಾಗಿದ್ದು, ಹಾಲು ಉತ್ಪಾದನೆಯ ಖರ್ಚು-ವೆಚ್ಚ ಹೆಚ್ಚಾಗಿದೆ. ಹೀಗಾಗಿ ಹಾಲಿನ ದರವನ್ನು ಏರಿಕೆ ಮಾಡುವಂತೆ ಬಾಲಚಂದ್ರ ಜಾರಕಿಗಹೊಳಿ ಮನವಿ ಮಾಡಿದ್ದಾರೆ.
KMF ಹಾಲಿನ ದರವನ್ನು 3 ರೂಪಾಯಿ ಹೆಚ್ಚಿಸಲು ಮನವಿ ಮಾಡಲಾಗಿದೆ. ಹೆಚ್ಚಳದ 3 ರೂಪಾಯಿನಲ್ಲಿ, ಕನಿಷ್ಠ 2 ರೂ. ಹಾಲು ಉತ್ಪಾದಕರಿಗೆ ಮತ್ತು 1 ರೂ. ಹಾಲು ಉತ್ಪಾದಕ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಪ್ರಸ್ತಾವನೆಯಲ್ಲಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಭಾರಿ ಕೆ ಎಂ ಎಫ್ ಪ್ರಸ್ತಾವನೆಯನ್ನೆ ಸಿ ಎಂ ಬಸವರಾಜ್ ಬೊಮ್ಮಾಯಿ ಅನುಮತಿಸುವ ಸಾಧ್ಯತೆ ಇದೆ.